ಫ್ರಾನ್ಸ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಗೆ ದೇಶದ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಗೌರವಾರ್ಥವಾಗಿ ಔತಣ ಕೂಟ ಆಯೋಜಿಸಿದ್ದರು. ಜುಲೈ 14ರಂದು ಫ್ರೆಂಚ್ ರಾಷ್ಟ್ರೀಯ ದಿನವನ್ನು ಆಚರಿಸಿದ್ದು ಈ ಪ್ರಯುಕ್ತ ಪ್ಯಾರಿಸ್ನ ಐಕಾನಿಕ್ ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ ಆಯೋಜಿಸಲಾಗಿತ್ತು.
ಪ್ರಧಾನಿ ಮೋದಿಯನ್ನು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಹಾಗೂ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಸ್ವಾಗತಿಸಿದರು. ಪ್ರಧಾನಿ ಮೋದಿಗಾಗಿ ಸಸ್ಯಾಹಾರಿ ಊಟವನ್ನು ವಿಶೇಷವಾಗಿ ಔತಣ ಕೂಟದಲ್ಲಿ ತಯಾರಿಸಲಾಗಿತ್ತು. ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ಹಾಡು ‘ಜೈ ಹೋ’ ಅನ್ನು ಪ್ಯಾರಿಸ್‌ನಲ್ಲಿ ಪಿಎಂ ಮೋದಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಎರಡು ಬಾರಿ ಪ್ಲೇ ಮಾಡಲಾಗಿದೆ.
ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಿರುವ ‘ಜೈ ಹೋ’ 2009 ರಲ್ಲಿ 81 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಪಡೆಯಿತು ಮತ್ತು 52 ನೇ ಗ್ರ್ಯಾಮಿಯಲ್ಲಿ ‘ಚಲನ ಚಿತ್ರಕ್ಕಾಗಿ ಬರೆದ ಅತ್ಯುತ್ತಮ ಹಾಡು’ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿತ್ತು.
https://twitter.com/ani_digital/status/1680470356539199488