ಇಂದು ನಡೆದ ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ನಾಮ ನಿರ್ದೇಶಿತ ಮತದಾನ ಹಕ್ಕು ನೀಡುವ ವಿವಾದದ ಬಳಿಕ ಸುಪ್ರೀಂ ಕೋರ್ಟ್ ನಾಮ ನಿರ್ದೇಶನಗೊಂಡವರಿಗೆ ಮತದಾನ ಹಕ್ಕಿರುವುದಿಲ್ಲ ಎಂದು ಆದೇಶಿಸಿತ್ತು.
ಅಲ್ಲದೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದು, ಹೀಗಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಪಡೆದುಕೊಂಡಿದ್ದ ಆಮ್ ಆದ್ಮಿ ಪಕ್ಷ ಮೇಯರ್ – ಉಪಮೇಯರ್ ಗದ್ದುಗೆಯನ್ನು ಹಿಡಿದಿದೆ.
https://twitter.com/TOIDelhi/status/1628314074458259457?ref_src=twsrc%5Etfw%7Ctwcamp%5Etweetembed%7Ctwterm%5E1628314074458259457%7Ctwgr%5Ecfa2efbe535e1ea30347d53d0fcd134f88dc8366%7Ctwcon%5Es1_&ref_url=https%3A%2F%2Ftimesofindia.indiatimes.com%2Fcity%2Fdelhi%2Fdelhi-mcd-mayor-election-live-updates-mcd-mayor-polls-today-aap-bjp-shelly-oberoi-rekha-gupta-latest-news%2Fliveblog%2F98136544.cms