BIG NEWS: ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ ಈ ಹೊಸ ನಿಯಮ

ನವದೆಹಲಿ: ಏಪ್ರಿಲ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ.

ಇಂದಿನಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಇರಿಸಬಹುದಾದ ಠೇವಣಿಯ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಕಾರ್ ಗಳ ದರ ದುಬಾರಿಯಾಗಲಿದ್ದು, ಔಷಧಗಳ ಬೆಲೆ ಏರಿಕೆ ಆಗಲಿದೆ. ಇಂದಿನಿಂದ ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯವಾಗಿದೆ. ದುಬಾರಿ ವಿಮೆಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ, ಆನ್ಲೈನ್ ಗೇಮ್ಸ್ ಗಳಿಗೆ ತೆರಿಗೆ ವಿಧಿಸಲಾಗುವುದು. ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ದುಬಾರಿ ಆಗಲಿದೆ. ಯುಪಿಐ ವಾಲೆಟ್ ಮೂಲಕ ಪಿಪಿಐ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆ.

ಅಗತ್ಯ ಔಷಧಗಳ ಬೆಲೆ

ಅಗತ್ಯ ಔಷಧಗಳ ಬೆಲೆ ಶೇಕಡ 12ರಷ್ಟು ಹೆಚ್ಚಳವಾಗಿದೆ.  ಕೇಂದ್ರ ಔಷಧ ಪ್ರಾಧಿಕಾರ ದರ ನಿಯಂತ್ರಣ ಪಟ್ಟಿಯಲ್ಲಿರುವ ಔಷಧಗಳ ಬೆಲೆ ದಾಖಲೆಯ 12.12ರಷ್ಟು ಏರಿಕೆಯಾಗಲಿದೆ.

ಹಿರಿಯ ನಾಗರಿಕರ ಹೂಡಿಕೆ ಮಿತಿ ಹೆಚ್ಚಳ

ಹಿರಿಯ ನಾಗರೀಕರಿಗೆ ಸಣ್ಣ ಉಳಿತಾಯದಲ್ಲಿ ಅನುಕೂಲ ಮಾಡಿಕೊಡಲಾಗಿದ್ದು, ಉಳಿತಾಯ ಯೋಜನೆ ಅಡಿ ಇರಿಸಬಹುದಾದ ಠೇವಣಿಗೆ ಮೊತ್ತವನ್ನು 15 ಲಕ್ಷ ರುಪಾಯಿಯಿಂದ 30 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಕಾರ್ ಗಳ ಬೆಲೆ ಏರಿಕೆ

ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಕಾರಣ ಮತ್ತು ಕೆಲವು ನಿರ್ದಿಷ್ಟ ಸುರಕ್ಷತಾ ಮಾನದಂಡ ಪಾಲನೆ ಕಡ್ಡಾಯವಾಗಿರುವುದರಿಂದ ಕಾರ್ ಕಂಪನಿಗಳು ಕಾರ್ ಗಳ ಬೆಲೆಯನ್ನು ಏರಿಕೆ ಮಾಡಿದ್ದು, ಇಂದಿನಿಂದ ಕಾರುಗಳ ದರ ದುಬಾರಿಯಾಗಲಿದೆ.

ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ

ಚಿನ್ನ ಮಾರಾಟಕ್ಕೆ ಸಂಖ್ಯೆ ಮತ್ತು ಅಲ್ಪಾಬೆಟ್ ಗಳ ಮಿಶ್ರಣ ಒಳಗೊಂಡ 6 ಅಂಕೆಗಳ ಹಾಲ್ಮಾರ್ಕ್ ಇಂದಿನಿಂದ ಕಡ್ಡಾಯಗೊಳಿಸಲಾಗಿದೆ.

ವಿಮೆ ಪ್ರೀಮಿಯಂಗೆ ತೆರಿಗೆ

5 ಲಕ್ಷ ರೂ,ಗಿಂತ ಹೆಚ್ಚಿನ ವಿಮೆಯ ಪ್ರೀಮಿಯಂಗೆ ತೆರಿಗೆ ವಿಧಿಸಲಾಗುವುದು. ವರ್ಷಕ್ಕೆ 5 ಲಕ್ಷ ರೂ.ಗಿಂತ ಹೆಚ್ಚು ಪ್ರೀಮಿಯಂ ಪಾವತಿಸುವ ಜೀವ ವಿಮಾ ಪಾಲಿಸಿಗಳ ಅವಧಿಯ ನಂತರ ಪಾಲಿಸಿದಾರರಿಗೆ ಸಿಗುವ ವಿಮಾ ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.

ಆನ್ಲೈನ್ ಗೇಮ್ ನಲ್ಲಿ ಗೆದ್ದರೆ ತೆರಿಗೆ

ಆನ್ಲೈನ್ ಗೇಮ್ ನಲ್ಲಿ ಗೆದ್ದರೆ 10,000 ರೂ. ಮತ್ತು ಅದಕ್ಕಿಂತ ಹೆಚ್ಚು ಹಣ ಗೆದ್ದರೆ ಅದಕ್ಕೆ ಶೇಕಡ 10ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆನ್ ಲೈನ್ ಮೂಲಕ ಗೆದ್ದ ಹಣದ ಬಗ್ಗೆ ಇತರೆ ಆದಾಯ ಮೂಲಗಳ ಅಡಿಯಲ್ಲಿ ನಮೂದಿಸುವುದು ಕಡ್ಡಾಯವಾಗಿರುತ್ತದೆ.

ಟೋಲ್ ಶುಲ್ಕ ಹೆಚ್ಚಳ

ರಾಷ್ಟ್ರೀಯ ಹೆದ್ದಾರಿ ಎಕ್ಸ್ ಪ್ರೆಸ್ ವೇಗಳಲ್ಲಿ ಟೋಲ್ ಶುಲ್ಕ ಇಂದಿನಿಂದ ಹೆಚ್ಚಳವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಟೋಲ್ ಶುಲ್ಕವನ್ನು ಶೇಕಡ 7ರವರೆಗೂ ಹೆಚ್ಚಳ ಮಾಡಿದೆ.

ಆದಾಯ ತೆರಿಗೆ

ವಾರ್ಷಿಕ ಆದಾಯ 7 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಇದಕ್ಕೆ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿದರೆ 7.5 ಲಕ್ಷ ರೂ. ವರೆಗೆ ತೆರಿಗೆ ಇರುವುದಿಲ್ಲ. 7 ಲಕ್ಷ ರೂ. ದಾಟಿದಲ್ಲಿ 3 ಲಕ್ಷದಿಂದಲೇ ತೆರೆಗೆ ಪಾವತಿಸಬೇಕಾಗುತ್ತದೆ. ಹೊಸ ತೆರಿಗೆ ಪದ್ಧತಿ ಬೇಕೋ ಹಳೆ ತೆರಿಗೆ ಪದ್ಧತಿ ಬೇಕೋ ಎಂಬುದನ್ನು ನಿರ್ಧರಿಸಬಹುದು. ಹಳೆ ತೆರೆಗೆ ಪದ್ಧತಿ ಆಯ್ಕೆ ಮಾಡಿಕೊಳ್ಳದಿದ್ದರೆ ಹೊಸ ಪದ್ದತಿಯಲ್ಲಿ ತೆರಿಗೆ ಲೆಕ್ಕಚಾರ ಮಾಡಲಾಗುತ್ತದೆ. ಇದರಲ್ಲಿ ಪಿಎಫ್, ಶಾಲಾ ಶುಲ್ಕ, ಮನೆ ಸಾಲದ ಮೇಲಿನ ಬಡ್ಡಿಗಳನ್ನು ಆದಾಯದಿಂದ ಕಡಿತಗೊಳಿಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read