ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್: ‘ಅಪ್ಪು ಗಂಧದಗುಡಿ ಅಗರಬತ್ತಿ’ ಬಿಡುಗಡೆ

ಬೆಂಗಳೂರು: ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಉದ್ಯಮ ಆರಂಭಿಸಿದ್ದಾರೆ. ಅಪ್ಪು ಹೆಸರಲ್ಲಿ ಅಗರಬತ್ತಿ ಉದ್ಯಮ ಆರಂಭಿಸಲಾಗಿದೆ.

“ಅಪ್ಪು ಗಂಧದಗುಡಿ ಅಗರಬತ್ತಿ ಪ್ರಸ್ತುತಪಡಿಸುತ್ತಿದ್ದೇವೆ. ಇದು ಸುಗಂಧದ ಪರಂಪರೆ.  ಪ್ರತಿ ಸುವಾಸನೆಯು ಭರವಸೆ ಮತ್ತು ಹೆಚ್ಚು ಸಮರ್ಥನೀಯ ಜಗತ್ತಿಗೆ ಒಂದು ಹೆಜ್ಜೆಯಾಗಿದೆ” ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಗಂಧದ ಗುಡಿ ಅಗರಬತ್ತಿ ಪ್ರಸ್ತುತಪಡಿಸುತ್ತಿರುವ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಆರಂಭವಾದ ಈ ಉದ್ಯಮದಿಂದ ಅದೆಷ್ಟೋ ಬಡ ಹೆಣ್ಣು ಮಕ್ಕಳಿಗೆ ಕೆಲಸ ದೊರೆತು ಸ್ವಾಭಿಮಾನದ ಬದುಕು ಸಿಗಲಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸ ಉದ್ಯಮಕ್ಕೆ ಒಳ್ಳೆಯದಾಗಲಿ. ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ್ದಾರೆ.

https://twitter.com/Ashwini_PRK/status/1784916594193297510

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read