ಬಳ್ಳಾರಿ : ಜಿಲ್ಲೆಯ ಸ್ಥಳೀಯ ಉದ್ದಿಮೆದಾರರಿಂದ ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಆಗಸ್ಟ್ 30 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಮಟ್ಟದ ಶಿಶಿಕ್ಷು ಮೇಳ(ಅಪ್ರೆಂಟಿಸ್ಶಿಪ್) ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ವಿವಿಧ ಕೈಗಾರಿಕಾ ಸಂಸ್ಥೆಗಳ (ಐಟಿಐ ಕಾಲೇಜ್) ಫಿಟ್ಟರ್, ಎಲೆಕ್ಟ್ರೀಷಿಯನ್ , ಟರ್ನರ್, ಮೆಷಿನಿಸ್ಟ್, ವೆಲ್ಡರ್, ಇಎಂ, ಎಂಎವಿ, ಡಿಸೇಲ್ ಮೆಕ್ಯಾನಿಕ್, ಕೊಪ, ಎಂಇವಿ ಮತ್ತು ವಿವಿಧ ವೃತ್ತಿಗಳ ತರಬೇತುದಾರರು ಅಂತಿಮ ವರ್ಷದ ಹಾಗೂ ಈಗಾಗಲೇ ತೇರ್ಗಡೆಯಾದ ತರಬೇತಿದಾರರು ಅಪ್ರೆಂಟಿಸ್ಶಿಪ್ ಮೇಳದಲ್ಲಿ ಪಾಲ್ಗೊಳ್ಳಬಹುದು.
ಬೇಕಾದ ದಾಖಲೆ: 18 ವರ್ಷ ಪೂರೈಸಿರಬೇಕು. ಎಸ್ಎಸ್ಎಲ್ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, 2 ಭಾವಚಿತ್ರ, ಆಧಾರ್ ಕಾರ್ಡ್, ಸ್ವ-ವಿವರವುಳ್ಳ (ಬಯೋಡಾಟ) ದೊಂದಿಗೆ ಹಾಜರಾಗಬಹುದು.
ಅರ್ಹರು ಭಾಗವಹಿಸಿ ಈ ಅಪ್ರೆಂಟಿಶಿಪ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಹೆಚ್.ಎಂ ಪಂಡಿತಾರಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.