ರಾಜ್ಯ ಜೆಡಿಎಸ್ ಗೆ ನೂತನ ಪದಾಧಿಕಾರಿಗಳ ನೇಮಕ

ಬೆಂಗಳೂರು: ಜೆಡಿಎಸ್ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಪ್ರಕಟಣೆ ಹೊರಡಿಸಿದ್ದಾರೆ.

ಆಲ್ಕೊಡ್ ಹನುಮಂತಪ್ಪ, ಸಿ.ಬಿ. ಸುರೇಶ್ ಬಾಬು, ಭೀಮಗೌಡ ಬಸನಗೌಡ ಪಾಟಿಲ್, ಸಾ.ರಾ. ಮಹೇಶ್ ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಹಿರಿಯ ಉಪಾಧ್ಯಕ್ಷರಾಗಿ ಡಾ. ಶ್ರೀನಿವಾಸಮೂರ್ತಿ, ರವೀಂದ್ರ ಶ್ರೀಕಂಠಯ್ಯ, ಸೋಮಣ್ಣಗೌಡ ಪಾಟೀಲ, ಜ್ಯೋತಿಪ್ರಕಾಶ್ ಮಿರ್ಜಿ ಅವರನ್ನು ನೇಮಕ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಕೆ.ಎಂ. ತಿಮ್ಮರಾಯಪ್ಪ, ರಾಜ ವೆಂಕಟಪ್ಪ ನಾಯಕ, ಕರೆಮ್ಮ ಜಿ ನಾಯಕ, ಚೌಡರೆಡ್ಡಿ ತೂಪಲ್ಲಿ, ಸುನಿತಾ ಚೌಹಾನ್, ಕೆ.ಬಿ. ಪ್ರಸನ್ನ ಕುಮಾರ್, ಟಿ.ಎ. ಶರವಣ ಆಯ್ಕೆಯಾಗಿದ್ದಾರೆ.

ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟರಾವ್ ನಾಡಗೌಡ, ಖಜಾಂಚಿಯಾಗಿ ಬಿ.ಎಂ. ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳಾಗಿ ಎ.ಪಿ. ರಂಗನಾಥ್, ಆರ್. ಪ್ರಕಾಶ್, ಸೈಯದ್ ರೋಷನ್ ಅಬ್ಬಾಸ್, ರೆಹಮದ್ ರೆಹಮತ್ ಉಲ್ಲಾಖಾನ್, ಸುಧಾಕರ ಲಾಲ್, ಶಿವಕುಮಾರ ನಾಟಿಕಾರ, ಶಾರದಾ ಅಪ್ಪಾಜಿಗೌಡ, ರುತ್ ಮನೋರಮ, ಮಲ್ಲೇಶ್ ಬಾಬು, ವೀರಭದ್ರಪ್ಪ ಹಾಲ ರವಿ ಅವರನ್ನು ನೇಮಕ ಮಾಡಲಾಗಿದೆ.

ಯುವ ಜನತಾದಳ ಕಾರ್ಯಧ್ಯಕ್ಷರಾಗಿ ರಾಜು ನಾಯಕ, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾಗಿ ರಶ್ಮಿ ರಾಮೇಗೌಡ, ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾಗಿ ಡಾ. ಕೆ. ಅನ್ನದಾನಿ ಅವರನ್ನು ನೇಮಕ ಮಾಡಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read