ಸಂಡೂರು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ 05 ವಾರದ ದೇಶಿ ಕೋಳಿ ಮರಿಗಳನ್ನು ವಿತರಿಸಲು ಗ್ರಾಮೀಣ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ-ಶೇ.17, ಪರಿಶಿಷ್ಟ ಪಂಗಡ-ಶೇ.07, ಹಿಂದುಳಿದ ವರ್ಗ-ಶೇ.32 ಮತ್ತು ಸಾಮಾನ್ಯ ವರ್ಗ-ಶೇ.44 ರ ಶೇಕಡವಾರು 05 ವಾರದ ದೇಶಿ ಕೋಳಿ ಮರಿಗಳನ್ನು ತಲಾ 20 ರಂತೆ ಒಟ್ಟಾರೆ ಸಂಡೂರು ತಾಲ್ಲೂಕಿನ 99 ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.
ಅರ್ಜಿಗಳನ್ನು ಪಶುವೈದ್ಯಕೀಯ ಸಂಸ್ಥೆಯಿAದ ಪಡೆದು ಭರ್ತಿ ಮಾಡಿ ಇದೇಆ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 04 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಸಂಡೂರಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ (ಆಡಳಿತ) ಹಾಗೂ ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ದೂ. 08395-260338 ಗೆ ಸಂಪರ್ಕಿಸಬಹುದು.
ಆಸಕ್ತ ಗ್ರಾಮೀಣ ರೈತ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಡೂರಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
