ಮೀನುಗಾರಿಕೆ ಇಲಾಖೆ ವತಿಯಿಂದ 2025-26 ನೇ ಸಾಲಿನ ಕೃಷಿಹೊಂಡ ಮತ್ತು ಸ್ವಂತ ಕೊಳಗಳಿರುವ ರೈತರಿಗೆ ಮೀನು ಕೃಷಿ ಕೈಗೊಳ್ಳಲು ಉಚಿತವಾಗಿ ಮೀನುಮರಿಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗರಿಷ್ಠ 500 ಸಂಖ್ಯೆಯ ಭಾರತೀಯ ಗೆಂಡೆ ಮೀನು, ಸಾಮಾನ್ಯ ಗೆಂಡೆ ಮೀನು ಹಾಗೂ ಬಲಿತ ಮೀನುಮರಿ ತಳಿಯ ಮೀನುಗಳನ್ನು ಉಚಿತವಾಗಿ ನೀಡಲಾಗುವುದು.
ಬೇಕಾದ ದಾಖಲೆ:
ಆಧಾರ್ ಕಾರ್ಡ್, ಪಹಣಿಯ ಪ್ರತಿ ಮತ್ತು ಪಾಸ್ ಪೋರ್ಟ್ ಸೈಜ್ನ ಪೋಟೋ ಜೊತೆಗೆ ಇನ್ನಿತರೆ ದಾಖಲೆಗಳನ್ನು ಬಳ್ಳಾರಿ ಅಥವಾ ಸಂಡೂರು ತಾಲ್ಲೂಕು ಮೀನುಗಾರಿಕೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊ.7406508971 ಮತ್ತು ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊ.7204911897 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ಮೀನು ಕೃಷಿ