ಶಿವಮೊಗ್ಗ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಜಿಲ್ಲಾ ಅಂಧತ್ವ ನಿಯಂತ್ರ ಕಾರ್ಯಕ್ರಮದಡಿ ನೇತ್ರ ಸಹಾಯಕರ 5 ಖಾಲಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಎರಡು ವರ್ಷದ ಡಿಪ್ಲೋಮಾ ಇನ್ ಅಪ್ಟೋಮೆಟ್ರಿ ಅಥವಾ ನೇತ್ರ ಸಹಾಯಕರಾಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್ಪಿಸಿಬಿ ನಿಯಮಾನುಸಾರ ತರಬೇತಿ ಪಡೆದಿರಬೇಕು. ಕಂಪ್ಯೂಟರ್ ಮತ್ತು ಇಂಟರ್ನೆಟ್ ಇತ್ಯಾದಿಗಳ ತರಬೇತಿಯಲ್ಲಿ ಉತ್ತೀರ್ಣರಾಗಿರಬೇಕು. 45 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು. ನೇಮಕಾತಿಯು ಮೇರಿಟ್ ಕಂ ರೋಸ್ಟರ್ ಕಂ ಅನುಭವ ಕಂ ಅರ್ಹತೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಮತ್ತು ಸ್ವವಿವರಗಳೊಂದಿಗೆ ಸೆ. 23 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222382/ 8197094440 /9481691580 ಗಳನ್ನು ಸಂಪರ್ಕಿಸುವುದು ಎಂದು ಪ್ರಕಟಣೆ ತಿಳಿಸಿದೆ.