ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ನ. 26 ರಿಂದ ಡಿ. 25 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್ತು, ಪೀನಟ್ ಕುಕಿಸ್, ವೆನಿಲ್ಲಾ ಬಟನ್, ಬನಾನಾ ಕೇಕ್, ಫ್ರುಟ್ ಕೇಕ್, ಸ್ಪಾಂಜ್‌ಕೇಕ್, ಆರೆಂಜ್ ಕೇಕ್, ಕಪ್ ಕೇಕ್, ಚಾಕಲೇಟ್ ಕೇಕ್, ಜಾಮ್ ರೋಲ್, ಜೆಲ್‌ಕೇಕ್, ಪೇಸ್ಟ್ರೀ ಕೇಕ್, ಬಟರ್ ಐಸಿಂಗ್, ಡೋ ನಟ್, ಮಿಲ್ಕ ಬ್ರೆಡ್, ಬನ್, ರಸ್ಕ್, ಫಿಜ್ಜಾ, ಪಪ್‌ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.

ಆಸಕ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ನ.25 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಪ್ರೋಫೆಸರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. -9449187763 ಮತ್ತು ಜಯಶಂಕರ-9686555897 ಇವರುಗಳನ್ನು ಸಂಪರ್ಕಿಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read