ವಾಯುಪಡೆ ಸೇರಲು ಯುವಕರು, ಯುವತಿಯರಿಗೆ ಅವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಭಾರತೀಯ ವಾಯುಪಡೆಯಲ್ಲಿ ಅವಿವಾಹಿತ ಯುವಕ ಯುವತಿಯರಿಗೆ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್ ಗಳಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ.

ವಿಜ್ಞಾನ ಸ್ಟ್ರೀಮ್‍ ನ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಹಾಗೂ ಇಂಗ್ಲಿಷ್ ವಿಷಯಗಳನ್ನೊಳಗೊಂಡಂತೆ ಶೇ.50 ಅಂಕ ಪಡೆದು ಪಾಸಾಗಿರಬೇಕು. ಇಂಗ್ಲಿಷ್ ವಿಷಯದಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು ಅಥವಾ 3 ವರ್ಷಗಳ ಡಿಪ್ಲೊಮಾ ಇನ್ ಇಂಜಿನಿಯರಿಂಗ್‍ನಲ್ಲಿ ಶೇ.50 ಅಂಕದೊಂದಿಗೆ ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಇನ್ ಫಾರ್ಮೇಷನ್ ಟೆಕ್ನಾಲಜಿ, ಆಟೋಮೊಬೈಲ್, ಇನ್‍ಸ್ಟ್ರೂಮೆಂಟ್ ಟೆಕ್ನಾಲಜಿ ವೃತ್ತಿಗಳಲ್ಲಿ ಪಾಸಾಗಿರಬೇಕು ಹಾಗೂ ವಿಷಯದಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು ಅಥವಾ ಎರಡು ವರ್ಷಗಳ ವೃತ್ತಿಪರ ಕೋರ್ಸ್‍ಗಳಲ್ಲಿ ವೃತ್ತಿಯೇತರ ವಿಷಯಗಳಾದ ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳೊಂದಿಗೆ ಶೇ.50 ಅಂಕ ಪಡೆದು ಪಾಸಾಗಿರಬೇಕು.

ವಿಜ್ಞಾನೇತರ ಸ್ಟ್ರೀಮ್‍ನ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ವಿಷಯದಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು. ಎರಡು ವರ್ಷಗಳ ವೃತ್ತಿಪರ ಕೋರ್ಸ್‍ಗಳಲ್ಲಿ ಶೇ.50 ಅಂಕಗಳನ್ನು ಪಡೆದು ಪಾಸಾಗಿರಬೇಕು.

ಅಭ್ಯರ್ಥಿಗಳು 2002ರ ಡಿಸೆಂಬರ್ 26 ರಿಂದ 2006ರ ಜೂನ್ 26 ರ ನಡುವೆ ಜನಿಸಿದವರಾಗಿರಬೇಕು. ಪುರುಷರು 152.5 ಸೆಂ.ಮೀ ಹಾಗೂ ಮಹಿಳೆಯರು 152 ಸೆಂ.ಮೀ ಎತ್ತರವಿರಬೇಕು ಮತ್ತು ಎತ್ತರಕ್ಕೆ ಅನುಗುಣವಾದ ತೂಕ ಹೊಂದಿರಬೇಕು.

ನೇಮಕಾತಿ ಪ್ರಕ್ರಿಯೆಯು ಎರಡು ಹಂತದ ಆನ್‍ಲೈನ್ ಪರೀಕ್ಷೆಗಳು, ದೈಹಿಕ ಸಾಮರ್ಥ್ಯ ಪರೀಕ್ಷೆ, ಅಡಾಪ್ಟೀವ್ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು http://agnipathvayu.cdc.in ಅಂತರ್ಜಾಲ ತಾಣ ಮೂಲಕ ಆನ್‍ಲೈನ್‍ನಲ್ಲಿ ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸುವುದು. ಅರ್ಜಿ ಶುಲ್ಕ 250 ರೂ.ಗಳನ್ನು ಆನ್‍ಲೈನ್ ಮೂಲಕ ಪಾವತಿಸಬೇಕು.

ಹೆಚ್ಚಿನ ವಿವರಗಳನ್ನು http://careerindianairforce.cdac.in ಅಂತರ್ಜಾಲ ತಾಣದಲ್ಲಿ ಪಡೆಯಬಹುದಾಗಿದೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಚಿತ್ರದುರ್ಗ ಇಲ್ಲಿ ಖುದ್ದಾಗಿ ಭೇಟಿ ನೀಡಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ 7022459064, 9945587060, 7899785165 ಗೆ ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read