BIG NEWS : ರಾಜ್ಯ ಸರ್ಕಾರದಿಂದ ‘ನೇಕಾರ್ ಸಮ್ಮಾನ್’ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.!

ಹಾಸನ : ಕೈಮಗ್ಗ ಮತ್ತು ಜವಳಿ ಇಲಾಖೆಯು ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವ ನೇಕಾರರಿಗೆ ವಾರ್ಷಿಕವಾಗಿ ರೂ.5,000 ಗಳನ್ನು ನೀಡಲು ನೇಕಾರರ ಸಮ್ಮಾನ್ ಯೋಜನೆಯಡಿ ಈಗಾಗಲೇ 2025-26 ನೇ ಸಾಲಿಗೆ ನೊಂದಾಯಿತರಾಗಿರುವ ನೇಕಾರರಿಂದ ಹಾಗೂ ನೇಕಾರಿಕೆಗೆ ಸಂಬAಧಿಸಿದ ಇತರೆ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ/ ವಿದ್ಯುತ್ ಮಗ್ಗ ನೇಕಾರರಿಂದ ಹೊಸದಾಗಿ ಅರ್ಜಿಗಳನ್ನು ಪಡೆದು ಅರ್ಹರಿರುವ ನೇಕಾರರ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟನಲ್ಲಿ ಅಪ್‌ಲೋಡ್ ಮಾಡಲು ಕೇಂದ್ರ ಕಚೇರಿ ಪತ್ರದಲ್ಲಿ ಸೂಚಿಸಲಾಗಿರುತ್ತದೆ.

ಅದರಂತೆ 2024-25 ನೇ ಸಾಲಿನಲ್ಲಿ ಸದರಿ ಯೋಜನೆಯಡಿ ಈಗಾಗಲೇ ಸೌಲಭ್ಯ ಪಡೆದಿರುವ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಂದ ಹಾಗೂ ಕೈಮಗ್ಗ / ವಿದ್ಯುತ್ ಮಗ್ಗ ನೇಯ್ಗೆಗೆ ಸಂಬAದಿಸಿದ ಇತರೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ನೇಕಾರರಿಂದ / ನೇಕಾರ ಸಹಕಾರ ಸಂಘಗಳ ಮೂಲಕ ಅರ್ಜಿ ಪಡೆಯಲಾಗುತ್ತಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಈ ಕೆಳಕಂಡ ದಾಖಲಾತಿಗಳೊಂದಿಗೆ ನೇಕಾರ ಸಹಕಾರ ಸಂಘ ಗಳ ಮೂಲಕ ಅಥವಾ ನೇರವಾಗಿ ಸಹಾಯಕ ನಿರ್ದೇಶಕರ ಕಚÉÃರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಿ.ಎಂ. ರಸ್ತೆ, ಹೆಚ್.ಡಿ.ಸಿ.ಸಿ ಬ್ಯಾಂಕ್ ಹತ್ತಿರ, ಡೈರಿ ಸರ್ಕಲ್, ಹಾಸನ ಕಚೇರಿಗೆ ಸೆ.15 ರೊಳಗಾಗಿ ಸಲ್ಲಿಸುವುದು.

ದಾಖಲಾತಿಗಳು: ಆಧಾರ ಕಾರ್ಡ, ರೇಷನ್ ಕಾರ್ಡ, ನೇಕಾರ ಸಮ್ಮಾನ್ ಐ.ಡಿ/ಪೆಹಚಾನ್ ಕಾರ್ಡ್, ಆದಾರ್ (NPCI) ಲಿಂಕ್‌ಡ್ ಬ್ಯಾಂಕ್ ಪಾಸ್ ಬುಕ್ ಪ್ರತಿ, ಕೈಮಗ್ಗ/ವಿದ್ಯುತ್ ಮಗ್ಗ ನೇಕಾರಿಕೆ ಮಾಡುತ್ತಿರುವ ಪೋಟೋ, ಕೈಮಗ್ಗ/ವಿದ್ಯುತ್ ಮಗ್ಗ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ನೇಕಾರರ ಮಜೂರಿ ಪಾವತಿ ರಸೀದಿಗಳು ಇರಬೇಕು ಎಂದು ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read