ವಿವಿಧ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಲು ಹೊರ ಗುತ್ತಿಗೆ ಆಧಾರ ಮೇಲೆ ಘಟಕ ಆಡಳಿತಾಧಿಕಾರಿಗಳು 02 ಹುದ್ದೆ, ಆಪ್ತ ಸಮಾಲೋಚಕರು 01 ಹುದ್ದೆ, ಸಮಾಜ ಸೇವಾ ಕಾರ್ಯಕರ್ತರು / ಕೇಸ್ ವರ್ಕರ್ 07 ಹುದ್ದೆ, ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) 09 ಹುದ್ದೆ ಮತ್ತು ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ 07 ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಘಟಕ ಆಡಳಿತಾಧಿಕಾರಿಗಳು ಹುದ್ದೆಗೆ ಎಂ.ಎಸ್ಡಬ್ಲೂ., ಸ್ನಾತಕೋತ್ತರ ಕಾನೂನು ಪದವಿ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಹೊಂದಿರಬೇಕು. ಆಪ್ತ ಸಮಾಲೋಚಕರ ಹುದ್ದೆಗೆ ಎಂ.ಎಸ್ಡಬ್ಲೂ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಪದವಿ ಹೊಂದಿರಬೇಕು. ಸಮಾಜ ಸೇವಾ ಕಾರ್ಯಕರ್ತರ / ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ, ಬಿ.ಎ (ಸೋಷಿಯಾಲಜಿ, ಮಹಿಳಾ ಅಧ್ಯಯನ) ಪದವಿ ಹೊಂದಿರಬೇಕು. ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು.

ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ (ರಾತ್ರಿ ಕಾವಲು) ಹುದ್ದೆಗೆ 7ನೇ ತರಗತಿ ವಿದ್ಯಾರ್ಹತೆ ಹೊಂದಿದ್ದು.
ಆಸಕ್ತ ಮಹಿಳಾ ಅಭ್ಯರ್ಥಿಗಳು ಉಪ ನಿರ್ದೇಶಕರವರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ. ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು -560029 ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರವನ್ನು ಎಲ್ಲಾ ದಾಖಲೆಗಳೊಂದಿಗೆ ಮೇ 2 ರ ಸಂಜೆ 5.30 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080- 29578688 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read