ಸಾರ್ವಜನಿಕರಿಗೆ ಗುಡ್ ನ್ಯೂಸ್: ಉಚಿತ, ಸಹಾಯಧನ ಸೌಲಭ್ಯದೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ, ದ್ವಾರಕಾ ಯಾತ್ರೆ ಮತ್ತು ಪುರಿಜಗನ್ನಾಥ ದರ್ಶನ ಯಾತ್ರೆಗಳಿಗೆ ಪ್ರವಾಸ ಕೈಗೊಳ್ಳಲು ಇಚ್ಛಿಸುವ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ-ಸಿ ಅಧಿಸೂಚಿತ ದೇವಸ್ಥಾನಗಳಲ್ಲಿ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರನ್ನು ಉಚಿತವಾಗಿ ಕಳುಹಿಸಲು ಹಾಗೂ ಇದಕ್ಕೆ ತಗುಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ದಕ್ಷಿಣ ಕ್ಷೇತ್ರಗಳ ಯಾತ್ರಾ:

ರಾಮೇಶ್ವರ-ಕನ್ಯಾಕುಮಾರಿ-ಮಧುರೈ-ತಿರುವನಂತಪುರ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಯಾತ್ರಾ ಪ್ಯಾಕೇಜ್‌ಗೆ ಒಟ್ಟು 25,000 ರೂ. ತಗುಲಲಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಅಂದಾಜು  10,000 ರೂ. ಭರಿಸಲಾಗುವುದು. ಇದರಲ್ಲಿ ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯಧನ 5,000 ರೂ. ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ 10,000 ರೂ. ಮಾತ್ರ ಪಾವತಿಸಬೇಕಾಗಿರುತ್ತದೆ.

ರೈಲು ಹತ್ತುವ ಮತ್ತು ಇಳಿಯುವ ಸ್ಥಳ: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು.

ದ್ವಾರಕಾ ಯಾತ್ರೆ: ದ್ವಾರಕಾ-ನಾಗೇಶ್ವರ-ಸೋಮನಾಥ-ತ್ರಯಂಬಕೇಶ್ವರ ಕ್ಷೇತ್ರಗಳನ್ನು ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್

ಪುರಿ ಜಗನ್ನಾಥ ದರ್ಶನ: ಪುರಿ-ಕೊನಾರ್ಕ್-ಗಂಗಾಸಾಗರ್- ಕೊಲ್ಕತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್. ಈ ಪ್ಯಾಕೇಜ್‌ಗೆ ಒಟ್ಟು 32,500 ರೂ. ತಗುಲಲಿದ್ದು, ಕರ್ನಾಟಕ ಸರ್ಕಾರದಿಂದ 17,500 ರೂ. ಭರಿಸಲಾಗುತ್ತದೆ. ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯ ಧನ  7,500 ರೂ. ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ 15,000 ರೂ. ಮಾತ್ರ ಪಾವತಿಸಬೇಕಾಗುತ್ತದೆ.

ರೈಲು ಹತ್ತುವ ಮತ್ತು ಇಳಿಯುವ ಸ್ಥಳ: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು.

ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಈ ಪ್ಯಾಕೇಜಿನಲ್ಲಿ 3 ಟೈರ್ ಎ.ಸಿ.ರೈಲಿನಲ್ಲಿ ಪ್ರಯಾಣ, ಊಟ ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ.

ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮುಜರಾಯಿ ತಹಶೀಲ್ದಾರ್‌ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read