ಮಡಿಕೇರಿ : ಪ್ರಸಕ್ತ (2025-26) ಸಾಲಿಗೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕಾಲೇಜು, ಕ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇಲ್ಲಿಗೆ ವಿಜ್ಞಾನ ವಿಭಾಗದ ಭೌತಶಾಸ್ತ್ರ ಉಪನ್ಯಾಸಕರು(01 ಹುದ್ದೆ) ಮತ್ತು ಗಣಿತ ಉಪನ್ಯಾಸಕರು(01 ಹುದ್ದೆ) ಮತ್ತು ವಿಜ್ಞಾನ ಶಿಕ್ಷಕರು(01 ಹುದ್ದೆ) ಅತಿಥಿ ಶಿಕ್ಷಕರ/ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. (ವಸತಿ ಹಾಗೂ ಊಟದ ಸೌಲಭ್ಯ ಒದಗಿಸಲಾಗುವುದು).
ವಿಜ್ಞಾನ ವಿಭಾಗದ ಭೌತಶಾಸ್ತ್ರ ಉಪನ್ಯಾಸಕರು ಮತ್ತು ಗಣಿತ ಉಪನ್ಯಾಸಕರ ಹುದ್ದೆಗೆ ವಿದ್ಯಾರ್ಹತೆ ಎಂಎಸ್ಸಿ/ಬಿ/ಇಡಿ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗೆ ಬಿ.ಎಸ್ಸಿ, ಬಿ.ಇಡಿ(ಸಿಬಿಜೆಡ್) ವಿದ್ಯಾರ್ಹತೆ ಹೊಂದಿರಬೇಕು. ವೇತನ ಶ್ರೇಣಿ ರೂ.18,150. ಅರ್ಜಿ ಸಲ್ಲಿಸಲು ಮೇ, 17 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್ಎಂಸಿ ಕಾಲೇಜು ಹತ್ತಿರ, ಮಡಿಕೇರಿ, ಕಚೇರಿ ದೂರವಾಣಿ ಸಂಖ್ಯೆ: 08272–225528, 9686138688 ಹಾಗೂ ಪ್ರಾಂಶುಪಾಲರು, ಡಾ||ಎಪಿಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ದೂ.ಸಂ.7676473767 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ತಿಳಿಸಿದ್ದಾರೆ.