ಖ್ಯಾತ ನಿರೂಪಕಿ ಅನುಶ್ರೀ -ರೋಷನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊಡಗು ಮೂಲದ ಉದ್ಯಮಿ ರೋಷನ್ ಜೊತೆಗೆ ನಿರೂಪಕಿ ಅನುಶ್ರೀ ಮದುವೆ ಇಂದು ನೆರವೇರಲಿದೆ.
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿದ್ದು, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಹಳದಿ ಡ್ರೆಸ್ ನಲ್ಲಿ ಅನುಶ್ರೀ, ರೋಷನ್ ಕಾಣಿಸಿಕೊಂಡಿದ್ದು, ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಮಾಡಲಾಗಿದೆ. ಇದು ಸಂಭ್ರಮ ಹೆಚ್ಚಿಸಿದ್ದು, ಮೆರುಗು ತಂದಿದೆ.
ಅನುಶ್ರೀ ಮತ್ತು ರೋಷನ್ ಅವರು ಸೇರಿದಂತೆ ಸಮಾರಂಭದಲ್ಲಿ ಭಾಗಿಯಾಗಿದ್ದವರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ‘ಸು ಫ್ರಂ ಸೋ’ ಚಿತ್ರದ ‘ಬಂದರೂ ಬಂದರೂ ಭಾವ ಬಂದರು’ ಹಾಡಿಗೆ ಅನುಶ್ರೀ, ರೋಷನ್ ಹೆಜ್ಜೆ ಹಾಕಿದ್ದಾರೆ.
ಗುರುವಾರ ಬೆಳಿಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ, ರೋಷನ್ ಮದುವೆ ನೆರವೇರಲಿದೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ನಡೆಯಲಿದ್ದು, ಗಣ್ಯರು, ಕಲಾವಿದರು ಭಾಗವಹಿಸಲಿದ್ದಾರೆ.