ಮನೆಗೆ ಬರುವ ಇರುವೆಗಳು ನೀಡುತ್ವೆ ಈ ಕೆಲವು ʼಸಂಕೇತʼ

ಮನೆಗಳಲ್ಲಿ ಇರುವೆಗಳು ಇರೋದು ಸಾಮಾನ್ಯ ಸಂಗತಿ. ಅಡುಗೆ ಮನೆಯಲ್ಲಿರುವ ಸಿಹಿ ತಿಂಡಿಗಳಿಗೆ ಇರುವೆಗಳು ಮುತ್ತಿಕೊಳ್ತವೆ. ಇರುವೆಗಳನ್ನು ಹೋಗಲಾಡಿಸಲು ಇನ್ನಿಲ್ಲದ ಪ್ರಯತ್ನಪಟ್ಟು ಸುಸ್ತಾಗುವವರಿದ್ದಾರೆ. ಮನೆಗೆ ಬರುವ ಈ ಇರುವೆಗಳು ಕೆಲ ಸಂಕೇತ ನೀಡುತ್ವೆ ಎಂಬುದು ನಿಮಗೆ ಗೊತ್ತಾ?

ಇರುವೆಗಳು ಮೇಲ್ಚಾವಣಿ ಮೇಲೆ ಓಡಾಡುತ್ತಿದ್ದರೆ ಶೀಘ್ರದಲ್ಲಿಯೇ ಹಣ, ಸಂತೋಷ ಪ್ರಾಪ್ತಿಯಾಗಲಿದೆ ಎಂದರ್ಥ.

ಇರುವೆಗಳು ಅಕ್ಕಿ ಪಾತ್ರೆಗೆ ಮುತ್ತಿಕೊಂಡ್ರೆ ಆದಷ್ಟು ಬೇಗ ಧನದ ವೃದ್ಧಿಯಾಗಲಿದೆ.

ಇರುವೆಗಳು ತುಪ್ಪ ತುಂಬಿದ ಪಾತ್ರೆಗೆ ಮುತ್ತಿದ್ರೆ, ಇಡೀ ರಾತ್ರಿ ಅಲ್ಲಿಯೇ ಇದ್ರೆ ಇದು ಸಂಪತ್ತಿನ ನಾಶದ ಸಂಕೇತ. ಕುಟುಂಬದಲ್ಲಿ ಸಂಪತ್ತು ನಾಶವಾಗಿ ಶೂನ್ಯಕ್ಕೆ ತಲುಪಲಿದೆ ಎಂದರ್ಥ.

ಮನೆಯೊಳಗೆ ಸಾಕಷ್ಟು ಕೆಂಪು ಇರುವೆಗಳು ಕಾಣಿಸಿಕೊಂಡ್ರೆ ಮಾರಣಾಂತಿಕ ಹಲ್ಲೆ ಅಥವಾ ಕಳ್ಳರ ಭಯ ಕಾಡಲಿದೆ.

ಕಪ್ಪು ಇರುವೆಗಳು ಆಭರಣಗಳಿಗೆ ಮುತ್ತಿದ್ರೆ ಚಿನ್ನ ಹಾಗೂ ಹಣದ ವೃದ್ಧಿಯಾಗಲಿದೆ ಎಂದರ್ಥ.

ಕೆಂಪು ಇರುವೆಗಳು ಮರದಿಂದ ಹೊರಗೆ ಬಂದ್ರೆ ಅನಾವೃಷ್ಠಿಯಾಗಲಿದೆ ಎಂದರ್ಥ. ಕಪ್ಪು ಇರುವೆಗಳು ಹೊರಗೆ ಬಂದ್ರೆ ಮಳೆಯಾಗಲಿದೆ ಎಂಬುದರ ಸಂಕೇತ.

ಪೂರ್ವಕ್ಕೆ ಇರುವೆಗಳು ಬಂದ್ರೆ 12 ಗಂಟೆ ಭಯದ ವಾತಾವರಣವಿದೆ ಎಂದರ್ಥ. ಪಶ್ಚಿಮಕ್ಕೆ ಇರುವೆಗಳು ಕಾಣಿಸಿಕೊಂಡ್ರೆ ಲಾಭದ ಸಂಕೇತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read