ಕ್ರಿಕೆಟಿಗ ಕಾರಿಯಪ್ಪಗೆ ಮತ್ತೊಂದು ಸಂಕಷ್ಟ : ಮಾಜಿ ಪ್ರೇಯಸಿಯಿಂದ ಡ್ರಗ್ಸ್ ಸೇವನೆ ಆರೋಪ

ಬೆಂಗಳೂರು : ಯುವತಿಗೆ ವಂಚಿಸಿರುವ ಆರೋಪ ಹೊತ್ತ ಕ್ರಿಕೆಟಿಗ ಕಾರಿಯಪ್ಪಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಾಜಿ ಪ್ರೇಯಸಿ ಇದೀಗ ಡ್ರಗ್ಸ್ ಸೇವನೆ ಆರೋಪ ಮಾಡಿದ್ದಾರೆ.

ಕಾರಿಯಪ್ಪ ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಮತ್ತೋರ್ವ ಯುವತಿಯ ಜೊತೆ ಸುತ್ತಾಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಇದರ ಜೊತೆ ಕಾರಿಯಪ್ಪ ಡ್ರಗ್ಸ್ ಸೇವನೆ ಕೂಡ ಮಾಡುತ್ತಿದ್ದರು ಎಂದು ಆರೋಪಿಸಿದ್ದು, ಯುವತಿ ಹೇಳಿಕೆಯಿಂದ ಕಾರಿಯಪ್ಪಗೆ ಸಂಕಷ್ಟ ಎದುರಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಾರಿಯಪ್ಪಗೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕಾರಿಯಪ್ಪ ‘ ನನ್ನ ಕ್ರಿಕೆಟ್ ಜೀವನ ಅಂತ್ಯಗೊಳಿಸುವುದಾಗಿ ಯುವತಿ ಬೆದರಿಕೆಯೊಡ್ಡಿ ಇಂತಹ ಆರೋಪಗಳನ್ನು ಮಾಡಿದ್ದಾರೆ. ಇವೆಲ್ಲಾ ಸುಳ್ಳು ‘ ಎಂದು ಕಾರಿಯಪ್ಪ ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read