‘ಸೈಕಲ್’ ಚಿತ್ರದಿಂದ ಬಂತು ಮತ್ತೊಂದು ಗೀತೆ

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಚಿನ್ ಪುರೋಹಿತ್ ನಿರ್ದೇಶನದ ‘ಸೈಕಲ್’ ಚಿತ್ರದ ಮತ್ತೊಂದು ಗೀತೆ ಇಂದು ಯೂಟ್ಯೂಬ್ನಲ್ಲಿ ರಿಲೀಸ್ ಆಗಿದೆ. ”ಮುಕ್ಕೋಟಿ ದೇವರ ಆಣೆ” ಎಂಬ ಈ ಹಾಡಿಗೆ ಗೋವಿಂದ್ ಕರ್ನೂಲ್  ಧ್ವನಿಯಾಗಿದ್ದು, ಆರನ್ ಕಾರ್ತಿಕ್ ಅವರ ಸಂಗೀತ ಮತ್ತು ಸಾಹಿತ್ಯವಿದೆ.

ಸಚಿನ್ ಪುರೋಹಿತ್ ಈ ಚಿತ್ರವನ್ನು  ನಿರ್ದೇಶಿಸಿ  ನಾಯಕನಾಗಿ ಅಭಿನಯಿಸಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅರ್ವಿನ್ ಸ್ಟ್ಯಾನಿ ಅವರ ನೃತ್ಯ ನಿರ್ದೇಶನ, ರಾಜ್ ಆಕಾಶ್ ಚವ್ಹಾಣ್ ಸಂಭಾಷಣೆ, ಅಶೋಕ್ ಸಾಹಸ ನಿರ್ದೇಶನ ಹಾಗೂ ಅರವಿಂದ್ ಜೆಪಿ & ರಾಮಾರ್ಜುನ್   ಸಂಕಲನವಿದೆ.

ಸಚಿನ್ ಪುರೋಹಿತ್ ಸೇರಿದಂತೆ ಸತ್ಯಶ್ರೀ, ದಯಾನಂದ್ ನೀನಾಸಂ, ಚೇತನ್ ಕನ್ನಡಿಗ, ಮುರ್ದಯ ಸಿಆರ್, ಮಮತಾ, ಶಾಲಿನಿ ಸಿ ಎನ್, ಮಲ್ಲಿಕಾರ್ಜುನ್ ತುಮಕೂರು ಬಣ್ಣ ಹಚ್ಚಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read