ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ‘ಪೌಡರ್’ ಚಿತ್ರದ ಮೊದಲ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದೀಗ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆಗೆ ಸಜ್ಜಾಗಿದೆ. ‘ಪರಪಂಚ ಗಮ ಗಮ’ ಎಂಬ ಈ ಹಾಡಿಗೆ ಆಂಟೋನಿ ದಾಸ್ ಧ್ವನಿಯಾಗಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ತ್ರಿಲೋಕ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಮಣ್ಯಂ ಮತ್ತು ಅರುಣಾಭ್ ಕುಮಾರ್ ನಿರ್ಮಾಣ ಮಾಡಿದ್ದು, ದೂದ್ ಪೇಡ ದಿಗಂತ್, ಧನ್ಯ ರಾಮ್ ಕುಮಾರ್, ಸೇರಿದಂತೆ ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅನಿರುದ್ಧ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ರವಿಶಂಕರ್ ಗೌಡ , ಹುಲಿ ಕಾರ್ತಿಕ್, ಬಣ್ಣ ಹಚ್ಚಿದ್ದಾರೆ. ಎನ್ ಹರಿಕೃಷ್ಣ ಹಾಗೂ ಗೌತಮ್ ಪಲ್ಲಕ್ಕಿ ಸಂಕಲನ, ತ್ರಿಲೋಕ ತ್ರಿವಿಕ್ರಮ್ ಸಂಭಾಷಣೆ, ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.
https://twitter.com/aanandaaudio/status/1815627883601162470