ಡಿಜಿಟಲ್ ಡೆಸ್ಕ್ : ಪಾಪಿ ಪತಿಯೊರ್ವ ತನ್ನ ಪತ್ನಿಯನ್ನು ಕೊಂದು ನಂತರ ದೇಹದ ಭಾಗಗಳನ್ನು 10 ಭಾಗಗಳಾಗಿ ತುಂಡರಿಸಿ ಎಸೆದ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಸಬೀನಾ ಅವರು ಕಳೆದ 5 ವರ್ಷಗಳ ಹಿಂದೆ ಅದೇ ಗ್ರಾಮದ ಸೈಫುದ್ದೀನ್ ಅವರನ್ನು ಮದುವೆ ಆಗಿದ್ದರು, ಸಬೀನಾಳನ್ನು ಪತಿ ಸೈಫುದ್ದೀನ್ ಚಿಕಿತ್ಸೆಗೆಂದು ಲಕ್ಷ್ಮಿ ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗಿದ್ದ, ಆದರೆ ಸಂಜೆ ಸೈಫುದ್ದೀನ್ ಸಬೀನಾಳನ್ನು ಮನೆಗೆ ಕರೆದುಕೊಂಡು ಬರಲಿಲ್ಲ. ಮನೆಯವರು ಈ ವಿಚಾರ ಕೇಳಿದ್ದಕ್ಕೆ ಸೈಫುದ್ದೀನ್ ನಾಟಕವಾಡಿದ್ದಾನೆ.
ಗಾಬರಿಗೊಂಡ ಸಹೋದರ ಸಬೀನಾಳ ಮೊಬೈಲ್ ಗೆ ಕರೆ ಮಾಡಿದ್ದು, ಆದರೆ ಸಬೀನಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಸಹೋದರ ಹತ್ತಿರದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾನೆ. ಪೊಲೀಸರು ಪತಿಯನ್ನು ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಪತ್ನಿಯನ್ನು ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಆಕೆಯನ್ನು ಹತ್ಯೆಗೈದು ಬಳಿಕ ಆಕೆಯ ದೇಹದ ಭಾಗಗಳನ್ನು ತುಂಡರಿಸಿ ಕೆಲವೊಂದು ಭಾಗಗಳನ್ನು ಸುಟ್ಟು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.