ಕಲಬುರಗಿ : ರಾಜ್ಯದಲ್ಲಿ ಹಾಡಹಗಲೇ ಮತ್ತೊಂದು ದರೋಡೆ ನಡೆದಿದ್ದು, ಕಲಬುರಗಿಯಲ್ಲಿ ಹಾಡಹಗಲೇ ಚಿನ್ನದಂಗಡಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸಿನಿಮಾ ಸ್ಟೈಲಲ್ಲಿ ಆಭರಣದ ಅಂಗಡಿಗೆ ನುಗ್ಗಿದ ಖದೀಮರು ಬರೋಬ್ಬರಿ 3 ಕೆಜಿ ಚಿನ್ನಾಭರಣ ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.
ಯೆಸ್, ನಗರದ ಸರಾಫ್ ಬಜಾರ್ ನಲ್ಲಿ ಹಾಡಹಗಲೇ ರಾಬರಿ ನಡೆದಿದೆ. ಮಾಸ್ಕ್ ಧರಿಸಿಕೊಂಡು ಗನ್ ಹಿಡಿದು ಏಕಾಏಕಿ ಅಂಗಡಿಗೆ ನುಗ್ಗಿದ ನಾಲ್ವರನ್ನೊಳಗೊಂಡ ಗ್ಯಾಂಗ್ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಎಸ್ಕೇಪ್ ಆಗಿದೆ.
ಮಾಸ್ಕ್ ಧರಿಸಿ ಬಂದು ಕೃತ್ಯ ಎಸಗಿದ್ದು, 2-3 ಕೆಜಿ ಚಿನ್ನ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಕಲಬುರಗಿ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.