ಸ್ಯಾಂಡಲ್ವುಡ್ ನ ಖ್ಯಾತ ಹಿರಿಯ ನಟ ರಮೇಶ ಅರವಿಂದ್ ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇಂದು ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ.
ರಮೇಶ್ ಅರವಿಂದ್ ಅವರ ನೂರಾಆರನೇ ಚಿತ್ರ ಇದಾಗಿದ್ದು, ತನ್ನ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿದ್ದು, ವಿಭಾ ಕಶ್ಯಪ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರವಿ ಕಶ್ಯಪ್ ನಿರ್ಮಾಣ ಮಾಡಿದ್ದಾರೆ. ಕಳೆದ ವರ್ಷ ರಮೇಶ್ ಅರವಿಂದ್ ಅವರ ಜನ್ಮದಿನದಂದೆ ಈ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿತ್ತು.ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದ್ದು ರಮೇಶ್ ಅರವಿಂದ್ ಅವರ ಈ ಲುಕ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.