ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ಗಬ್ಬದ ಹಸು ಕಡಿದು ದುರುಳರು ವಿಕೃತಿ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್ ಒಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಈ ಕೃತ್ಯ ಎಸಗಿದ್ದಾರೆ. ಗಬ್ಬದ ಹಸು ಕಡಿದು ನಂತರ ಅಂಗಾಗಗಳನ್ನು ಹೂಳಲು ಯತ್ನಿಸಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮರ್ಕಲ್ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ.
ಘಟನೆ ಸಂಬಂಧ ಎಲ್ಲಾ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತೋಟದ ಇನ್ನೊಬ್ಬ ಕೆಲಸಗಾರ ಕೃತ್ಯದ ಬಗ್ಗೆ ಸುಳಿವು ನೀಡಿದ್ದು, ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ 45 ಕೆಜಿ ಹಸುವಿನ ಮಾಂಸ ವಶ ಪಡೆದುಕೊಂಡಿದ್ದಾರೆ. ಹಾಗೂ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
You Might Also Like
TAGGED:ರಾಕ್ಷಸಿ ಕೃತ್ಯ