‘ಗಜರಾಮ’ ಚಿತ್ರದ ”ಕನಸಲೇ ಕವಿತೆ” ಎಂಬ ಬ್ಯೂಟಿಫುಲ್ ಮೆಲೋಡಿ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಂಗೀತ ಪ್ರಿಯರ ಗಮನ ಸೆಳೆದಿದ್ದು, ಇದೀಗ ಮತ್ತೊಂದು ಲಿರಿಕಲ್ ಹಾಡು ಜನವರಿ 14 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ, ‘ಎಲ್ಲಾ ಹೇಳಬೇಕಿದೆ’ ಎಂಬ ಈ ಹಾಡಿಗೆ ಶಾನ್ ಮತ್ತು ಶ್ರೇಯಾ ಗೋಶಾಲ್ ಧ್ವನಿಯಾಗಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
ಸುನಿಲ್ ಕುಮಾರ್ ವಿ ಎ ನಿರ್ದೇಶನದ ಈ ಚಿತ್ರವನ್ನು ಲೈಫ್ ಲೈನ್ ಫಿಲಂಸ್ ಬ್ಯಾನರ್ ನಲ್ಲಿ ನರಸಿಂಹಮೂರ್ತಿ ನಿರ್ಮಾಣ ಮಾಡಿದ್ದು, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹಾಗೂ ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಕ್, ಕಬೀರ್ ಸಿಂಗ್, ಶರತ್ ಲೋಹಿತಾಶ್ವ ಉಳಿದ ತಾರಾಂಗಣದಲ್ಲಿದ್ದಾರೆ. ಮನೋಮೂರ್ತಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನ, ಕೆ.ಎಸ್. ಧನಂಜಯ ಬಿ ನೃತ್ಯ ನಿರ್ದೇಶನ, ಕೆ ಎಸ್ ಚಂದ್ರಶೇಖರ್ ಛಾಯಾಗ್ರಾಹಣ, ಹಾಗೂ ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ, ಟೈಗರ್ ಶಿವು ಅವರ ಸಾಹಸ ನಿರ್ದೇಶನವಿದೆ.