ಯಾದಗಿರಿ : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯನ್ನು ಅರೆನಗ್ನಗೊಳಿಸಿ ಕಾರದಪುಡಿ ಎರಚಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದ ಘಟನೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ತಾಂಡಾವೊಂದರಲ್ಲಿ ನಡೆದಿದೆ.
ಈ ಕುರಿತು ಕೆಂಭಾವಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಅನೈತಿಕ ಸಂಬಂಧದ ಆರೋಪ ಮಾಡಿರುವ ಸಂಬಂಧಿಕರು ಆಕೆಯ ಮೇಲೆ ರಾಕ್ಷಸರಂತೆ ಎರಗಿದ್ದಾರೆ.
ಅ.16ರಂದು ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಮಹಿಳೆ ಪತಿ ಹಾಗೂ ಅಳಿಯನ ಜೊತೆ ಮನೆಯಲ್ಲಿದ್ದಾಗ, ಕಬ್ಬಿಣದ ರಾಡು ಹಿಡಿದು ಮನೆಗೆ ಬಂದ ಸಂಬಂಧಿಕರು ಹಾಗೂ ಗ್ರಾಮದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹಲ್ಲೆ ನಡೆಸಿದ್ದಾರೆ. ತಲೆಗೂದಲು ಕತ್ತರಿಸಿ ಬಟ್ಟೆ ಹರಿದು ಖಾರದ ಪುಡಿ ಎರಚಲಾಯಿತು.. ನನಗೆ ಜೀವಬೆದರಿಕೆ ನಗೆ ಹಾಕಲಾಗಿದೆ’ ಎಂದು ಸಂತ್ರಸ್ತೆ ಮಹಿಳೆ ದೂರಿದ್ದಾಳೆ. ಅ.17ರಂದು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
