ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, 18 ವರ್ಷದ ಮಗಳನ್ನೇ ಸ್ವಂತ ತಂದೆ ಕೊಂದು ಸುಟ್ಟು ಹಾಕಿದ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ.
ಕವಿತಾ (18) ಎಂಬ ಯುವತಿಯನ್ನು ತಂದೆ ಶಂಕರ್ ಕೊಳ್ಳೂರು ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ್ದ ಶರಣು ಮತ್ತು ದತ್ತಪ್ಪನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಲಿಂಗಾಯತ ಸಮಾಜದ ಯುವತಿ ಅದೇ ಗ್ರಾಮದ ಕುರುಬ ಸಮುದಾಯದ ಯುವಕ ಮಾಳಪ್ಪ ಪೂಜಾರಿಯನ್ನು ಲವ್ ಮಾಡುತ್ತಿದ್ದರು. ಪಿಯುಸಿ ಓದುತ್ತಿದ್ದಾಗಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಈ ವಿಷಯ ತಿಳಿದು ಮನೆಯವರು ಕಾಲೇಜು ಬಿಡಿಸಿದ್ದರು. ಆದರೆ ಯುವಕನನ್ನೇ ಕವಿತಾ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಕ್ಕೆ ಈ ಕೊಲೆ ನಡೆದಿದೆ.
ಯುವಕನನ್ನೇ ಕವಿತಾ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದು ಮಧ್ಯರಾತ್ರಿ ತಂದೆ ಶಂಕರ್ ಸಹೋದರ ಶರಣು ಜೊತೆ ಸೇರಿಕೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಕ್ರಿಮಿನಾಷಕ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿದ್ದರು. ನಂತರ ಜಮೀನನಲ್ಲಿ ಕವಿತಾಳ ಶವವನ್ನು ಸುಟ್ಟು ಹಾಕಿದ್ದರು. ಪೊಲೀಸರು ವಿಚಾರಣೆ ನಡೆಸಿದ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.