ರಾಜ್ಯ ಸರ್ಕಾರದಿಂದ ʻನಿರುದ್ಯೋಗಿ ಯುವಕ-ಯುವತಿಯರಿಗೆ ಮತ್ತೊಂದು ಗುಡ್ ನ್ಯೂಸ್‌

ಬೆಳಗಾವಿ : ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿ ಬಳ್ಳಾರಿ ಗಾರ್ಮೆಂಟ್ಸ್‌ ಎಕ್ಸ್‌ಪೋರ್ಟ್‌ ಕ್ಲಸ್ಟರ್‌ಗೆ  ಜೀನ್ಸ್‌ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸಲು ಬಳ್ಳಾರಿ ಜಿಲ್ಲೆಯ ಆಲದಹಳ್ಳಿ ಗ್ರಾಮದಲ್ಲಿ 50 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಎಸ್.‌ ಪಾಟೀಲ್‌ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು,  ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿ ಬಳ್ಳಾರಿ ಗಾರ್ಮೆಂಟ್ಸ್‌ ಎಕ್ಸ್‌ಪೋರ್ಟ್‌ ಕ್ಲಸ್ಟರ್‌ಗೆ  ಜೀನ್ಸ್‌ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸಲು ಬಳ್ಳಾರಿ ಜಿಲ್ಲೆಯ ಆಲದಹಳ್ಳಿ ಗ್ರಾಮದಲ್ಲಿ 50 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. ಈ ಮೂಲಕ ಎಲ್ಲಾ ಘಟಕಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಿ ಉತ್ಪನ್ನಗಳ ಗುಣಮಟ್ಟದ ಹೆಚ್ಚಳ ಹಾಗೂ ಉತ್ಪಾದನಾ ವೆಚ್ಚ ಸಾಗಾಣಿಕೆ ವೆಚ್ಚ, ಸ್ಪರ್ಧಾತ್ಮಕ ದರದಲ್ಲಿ ಜೀನ್ಸ್ ಉತ್ಪನ್ನವನ್ನು ಮಾರುಕಟ್ಟೆಗೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪಿಎಂ ಮಿತ್ರಾ ಪಾರ್ಕ್‌ ನಿರ್ಮಾಣದ ಮೂಲಕ ಉತ್ಪಾದನೆ, ಉದ್ಯೋಗ ಸೃಷ್ಟಿ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಕರ್ನಾಟಕವನ್ನು ಸ್ಪರ್ಧಾತ್ಮಕ ರಾಜ್ಯವನ್ನಾಗಿಸಲು ಹೂಡಿಕೆಗಳನ್ನು ಆಕರ್ಷಿಸಿ ಹೆಚ್ಚಿನ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. ಸುಸ್ಥಿರ ಕೈಗಾರೀಕರಣದ ಅನ್ವೇಷಣೆ ಹಾಗೂ ಉತ್ತೇಜನೆ, ನಾವಿನ್ಯ ಅನ್ವೇಷಣೆ, ಸ್ಥಿತಿಸ್ಥಾಪಕ ಸೌಕರ್ಯವನ್ನು ನಿರ್ಮಿಸುವವ ಧ್ಯೆಯೋದೇಶಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read