ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇತ್ತೀಚೆಗೆ ನಡೆದಿದ್ದ ಯುವ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಘಟನೆಯನ್ನು ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವೈದ್ಯ ಸಮೂಹ ನಾಳೆ ಓ ಪಿ ಡಿ ಬಂದ್ ಮಾಡಿ ದೇಶದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಇದರ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಶಾಂತಿ, ಸಹನೆಗೆ ಹೆಸರಾಗಿದ್ದ ಶಕ್ತಿ ಗರ್ ಜಿಲ್ಲೆ ನಾಡೂರು ಹಳ್ಳಿ ಸಮೀಪದ ಜಪ್ನಾತಾಲ ಆದಿವಾಸಿ ಪಾರಾದಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ತನ್ನ ಊರಿಗೆ ಕೆಲ ದಿನಗಳ ಹಿಂದಷ್ಟೇ ಆಗಮಿಸಿದ್ದ 25 ವರ್ಷದ ಪ್ರಿಯಾಂಕ ಎಂಬ ಯುವತಿಯ ತಲೆ ಹಾಗೂ ಕೈ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಆಕೆಯ ಪೋಷಕರ ಹೊಲದಲ್ಲಿಯೇ ಶವವನ್ನು ಬಿಸಾಡಲಾಗಿದೆ. ಈ ಭೀಕರ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನಿಂದ ಆಗಮಿಸಿದ್ದ ಪ್ರಿಯಾಂಕ ಶೌಚಾಲಯಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದು, ಎಷ್ಟು ಹೊತ್ತು ಆದರೂ ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ತಾಯಿ ತನ್ನ ಬಂಧುಗಳ ಜೊತೆ ಎಲ್ಲೆಡೆ ಹುಡುಕಾಡಿದರೂ ಪ್ರಿಯಾಂಕ ಸುಳಿವು ಸಿಕ್ಕಿರಲಿಲ್ಲ. ಈಗ ಆಕೆಯ ರುಂಡ ಮುಂಡ ಬೇರ್ಪಟ್ಟ ಶವ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಜೊತೆಗೆ ಆರೋಪಿಗಳ ಬಂದನಕ್ಕೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
https://twitter.com/satyaagrahindia/status/1824056980266156098?ref_src=twsrc%5Etfw%7Ctwcamp%5Etweetembed%7Ctwterm%5E1824056980266156098%7Ctwgr%5Ed115503e26d16a86aa8e010ab894d