ಬೆಂಗಳೂರು : ಇಂದಿನಿಂದ ಕಾಂಗ್ರೆಸ್ ಮೂರನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆ ಅನುಷ್ಟಾನಗೊಳ್ಳಲಿದ್ದು, ಈ ಹಿನ್ನೆಲೆ ಬಿಜೆಪಿಯನ್ನು ಕಾಲೆಳೆದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ನಾವು ಭರವಸೆ ನೀಡಿದ್ದ ಮೂರನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಗೆ ಬರುತ್ತಿದೆ. ಅನ್ನಕ್ಕೆ ಕಲ್ಲು ಹಾಕುವ ಕೇಂದ್ರ ಸರ್ಕಾರದ ಕುತಂತ್ರವನ್ನೂ ಮೀರಿ ಹಣ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನೆಡೆಯುತ್ತಿದ್ದೇವೆ. ಈಗಾಗಲೇ ನಾವು 3 ಗ್ಯಾರಂಟಿಗಳನ್ನು ನೀಡಿದರೂ ಬಿಜೆಪಿಗೆ ವಿಪಕ್ಷ ನಾಯಕ ಸಿಗುವ ಗ್ಯಾರಂಟಿ ಇಲ್ಲ! ಗೌರವಾನ್ವಿತ ಸದನವನ್ನು, ಕನ್ನಡಿಗರನ್ನು ಕುಚೋದ್ಯ ಮಾಡುತ್ತಿದೆಯೇ ಬಿಜೆಪಿ? ಎಂದು ಬಿಜೆಪಿಯನ್ನು ಕಾಲೆಳೆದು ಕಾಂಗ್ರೆಸ್ ಟ್ವೀಟ್ ಮಾಡಿದೆ.
5 ಕೆಜಿ ಅಕ್ಕಿ ಜೊತೆ ಹಣ ನೀಡುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
https://twitter.com/INCKarnataka/status/1678255863004532738?ref_src=twsrc%5Egoogle%7Ctwcamp%5Eserp%7Ctwgr%5Etweet