ರಾಹುಲ್‌ ಮದುವೆಯಾದ ಬಳಿಕ ಅಂಜಲಿ ಬದುಕು ಹೇಗಿರಬಹುದು: ʼಕುಛ್‌ ಕುಛ್‌ ಹೋತಾ ಹೈʼ ಮುಂದುವರೆದ ಭಾಗ ಹೀಗಿರಬಹುದು ಎಂಬ ಕಲ್ಪನೆ ಸೃಷ್ಟಿಸಿದ ಮಹಿಳೆ

ಶಾರುಖ್‌ ಖಾನ್‌ ನಟನೆಯ ಅನೇಕ ಕ್ಲಾಸಿಕ್ ಹಿಟ್ ಚಿತ್ರಗಳ ಸಾಲಿನಲ್ಲಿ ’ಕುಛ್‌ ಕುಛ್‌ ಹೋತಾ ಹೈ’ ಕೂಡಾ ಒಂದು. ಇದೀಗ ಟ್ವಿಟರ್‌ ಥ್ರೆಡ್ ಒಂದರಲ್ಲಿ, ರಾಹುಲ್‌ನನ್ನು ಮದುವೆಯಾದ ಅಂಜಲಿಯ ಆಲೋಚನೆಗಳು ಹೇಗಿರಬಹುದು ಎಂಬ ಕಲ್ಪನೆಯನ್ನು ಹರಿಬಿಡಲಾಗಿದೆ.

ಟ್ವಿಟರ್‌ ಬಳಕೆಗಾರ್ತಿ ಪ್ರೊಮಿತಾ ಬರ್ದೋಲಾಯ್‌ ಈ ಕುರಿತು ಟ್ವೀಟ್ ಮಾಡಿದ್ದಾರೆ. “ಹಾಯ್, ನಾನು ಅಂಜಲಿ. ಅಂಜಲಿ ಶರ್ಮಾ ಫ್ರಂ ಕೆಕೆಎಚ್‌ಎಚ್‌. ನಾನು ಅಮನ್‌ನನ್ನು ಬಿಟ್ಟು ರಾಹುಲ್‌ನನ್ನು ಮದುವೆಯಾದಾಗಿನಿಂದ ನನ್ನ ಜೀವನ ಹೇಗೆ ಸಾಗಿ ಬಂದಿದೆ ಎಂಬ ಕುರಿತು ಇದು ನನ್ನ ಸಂಕ್ಷಿಪ್ತ ವಿವರ,” ಎಂದು ಬರೆಯುತ್ತಾ ಸಾಗಿದ್ದಾರೆ.

ರಾಹುಲ್‌ನನ್ನು ಮದುವೆಯಾದ ಘಳಿಗೆ ಅಂಜಲಿ ಹೇಗೆ ಬಹಳ ಉತ್ಸುಕರಾಗಿದ್ದರು ಎಂದು ಬರೆಯುವ ಬರ್ದೋಲಾಯ್, “ನನಗೆ 20 ವರ್ಷವಾಗಿದ್ದ ಸಮಯಕ್ಕೆ ನಾನು ವಾಪಸ್ ಹೋಗಲಿದ್ದೆ. ಆದರೆ ನನಗೆ 31 ವರ್ಷ ಆಗಿತ್ತು. ನಾನು ಆತನೊಂದಿಗೆ ಬಹುತೇಕ ಒಂದು ದಶಕ ಕಳೆದಿದ್ದೇನೆ. ನಾನು ಆತನನ್ನು ಡೇಟ್ ಮಾಡದೆಯೇ ಮದುವೆಯಾಗಿದ್ದೇನೆ. ಬೇಸಿಗೆ ಶಿಬಿರವೊಂದರಲ್ಲಿ ನಾನು ಆತನನ್ನು ಮೂರು ದಿನಗಳ ಮಟ್ಟಿಗೆ ಭೇಟಿಯಾದೆ. ಬಳಿಕ ನನ್ನ ಮದುವೆಯಲ್ಲಿ. ರಾಹುಲ್‌ ನನ್ನ ಪಾಲಿಗೆ ಬಿಡಿಸಲಾಗದ ಒಗಟಾಗಿದ್ದ, ಮತ್ತು ಅವಕಾಶ ಸಿಕ್ಕ ಕೂಡಲೇ ಮದುವೆಯ ಬಂಧದೊಳಗೆ ಹಾರಿಬಿಟ್ಟೆ,” ಎನ್ನುವ ಅಂಜಲಿ, ರಾಹುಲ್ ಹೇಗೆ ತನ್ನೊಂದಿಗೆ ಫುಟ್ಬಾಲ್ ಆಡಲು ಹೇಳಿದ ಎಂದು ತಿಳಿಸಿದ್ದು, ಜೊತೆಯಲ್ಲಿ, ಕಾಲೇಜಿನಲ್ಲಿದ್ದಂಥದ್ದೇ ಬ್ಯಾಸ್ಕೆಟ್‌ಬಾಲ್ ಅಂಗಳವನ್ನು ಸಜ್ಜುಗೊಳಿಸಿದ ಎಂದೆಲ್ಲಾ ವಿವರಿಸುತ್ತಾ ಸಾಗುತ್ತಾಳೆ ಅಂಜಲಿಯ ಈ ಕಾಲ್ಪನಿಕ ಸೃಷ್ಟಿ.

12 ಟ್ವೀಟ್‌ಗಳ ಸರಣಿಯಲ್ಲಿ ಪ್ರಮಿತಾ ಅಂಜಲಿ ’ಒಂದು ವೇಳೆ ಹೀಗಿದ್ದಿದ್ದರೆ ಏನೆಲ್ಲಾ ಮಾಡಿರುತ್ತಿದ್ದಳು’ ಎಂಬ ಕಲ್ಪನೆಯನ್ನು ವಿಸ್ತಾರವಾಗಿ ಹರವಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read