ಹಾಲು ಖರೀದಿ ದರ ಕಡಿತಗೊಳಿಸಿದರೆ ಒಕ್ಕೂಟ ಸೂಪರ್ ಸೀಡ್: ಸರ್ಕಾರದ ಎಚ್ಚರಿಕೆ

ಮೈಸೂರು: ಹಾಲಿನ ದರ ಬದಲಿಸಿದರೆ ಒಕ್ಕೂಟಗಳನ್ನು ಸೂಪರ್ ಸೀಡ್ ಮಾಡುವುದಾಗಿ ಪಶು ಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಹಕಾರಿ ಹಾಲು ಒಕ್ಕೂಟಗಳು ಸರ್ಕಾರದ ಗಮನಕ್ಕೆ ತಾರದೆ ಹಾಲಿನ ದರ ಖರೀದಿ ವಿಚಾರದಲ್ಲಿ ತಮಗಿಷ್ಟ ಬಂದಂತೆ ಬದಲಾವಣೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ 1.5 ರೂ., ಮಂಡ್ಯದಲ್ಲಿ 1.75 ರೂ., ಚಾಮರಾಜನಗರದಲ್ಲಿ 1 ರೂ. ಕಡಿತಗೊಳಿಸಲಾಗಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ. ಹಾಲು ಖರೀದಿ ದರದಲ್ಲಿ ತಮಗಿಷ್ಟ ಬಂದಂತೆ ಬದಲಾವಣೆ ಮಾಡಬಾರದು. ಏನೇ ಮಾಡಿದರೂ ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಈ ಸಂಬಂಧ ಹಾಲು ಒಕ್ಕೂಟದ ಎಲ್ಲಾ ಉನ್ನತ ಅಧಿಕಾರಿಗಳ ಸಭೆ ನಡೆಸಿ ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಬೇಕಾಬಿಟ್ಟಿ ದರ ನಿಗದಿಗೆ ಕಡಿವಾಣ ಹಾಕಲಾಗುವುದು. ಸರ್ಕಾರದ ಗಮನಕ್ಕೆ ತಾರದೆ ಹಾಲಿನ ದರ ಕಡಿತ ಮಾಡಿದ ಒಕ್ಕೂಟಗಳನ್ನು ಸೂಪರ್ ಸೀಡ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read