ಮುಂಬೈ: ರಿಲಯನ್ಸ್ ಗ್ರೂಪ್ ಅಧ್ಯಕ್ಷ, ಉದ್ಯಮಿ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ನೀಡಿದೆ. ಅನಿಲ್ ಅಂಬಾನಿ ಸಹಾಯಕ ಮತ್ತು ರಿಲಯನ್ಸ್ ಪವರ್ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಇಡಿ ಬಂಧಿಸಿದೆ.
ರಿಲಯನ್ಸ್ ಪವರ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿದೆ.
ಜಾರಿ ನಿರ್ದೇಶನಾಲಯವು ಈ ಹಿಂದೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ಆರಂಭಿಸಿದ ನಂತರ ಈ ಬಂಧನ ಆಗಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ನಡೆಸಿದ ಶಂಕಿತ ಸಾಲ ವಂಚನೆಗಳ ತನಿಖೆಯಾಗಿತ್ತು. ತನಿಖೆಯು ಕೇಂದ್ರವು ಸಲ್ಲಿಸಿದ ಎರಡು ಎಫ್‌ಐಆರ್‌ಗಳನ್ನು ಆಧರಿಸಿದೆ. ಇದೀಗ ರಿಲಯನ್ಸ್ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಆಶಿಕ್ ಕುಮಾಲ್ ಪಾಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
The Enforcement Directorate has arrested Ashok Kumar Pal, Chief Financial Officer (CFO) of Reliance Power Limited, in the alleged Reliance Power fake bank guarantee and fake invoicing case. Pal was arrested last night after questioning in the Delhi office. He will be produced…
— ANI (@ANI) October 11, 2025