ಆನೇಕಲ್: ಸಾಕಿದ ನಾಯಿಯನ್ನು ಇಬ್ಬರು ವೃದ್ಧರು ಕಟ್ಟಿಹಾಕಿ ಮನಬಂದಂತೆ ಹೊಡೆದಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.
ಇಲ್ಲಿನ ಹೊಸೂರು ಬಳಿಯ ಇರುತುಕೋಟೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಕೋಳಿ, ಮೇಕೆಗಳಿಗೆ ನಾಯಿ ಕಚ್ಚಿದೆ ಎಂದು ಸಾಅಕುನಾಯಿಯನ್ನು ಕಂಭಕ್ಕೆ ಕಟ್ಟಿಹಾಕಿದ ಇಬ್ಬರು ವೃದ್ಧರು ದೊಣ್ಣೆ ಯಲ್ಲಿ ನಾಯಿಗೆ ಮನಬಂದಂತೆ ಬಡಿದಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ನಾಯಿ ಜೀವ ಉಳಿಸಿಕೊಳ್ಳಲು ಕೂಗಾಡಿದೆ. ಆದರೂ ಬಿಟ್ಟಿಲ್ಲ.
ನಾವಿ ಕೂಗಾಡುತ್ತಿದ್ದರೂ ಸಮೀಪದಲ್ಲಿದ್ದವರು ರಕ್ಷಣೆ ಮಾಡದೇ ವಿಡಿಯೋ ಮಾಡುತ್ತಿದ್ದರು. ಕೃಷ್ಣಗಿರಿ ಬಳಿಯ ಪ್ರಾಣಿ ಹಿಂಸೆವ್ ತಡೆ ಸಂಘದ ಸದಸ್ಯರು ಸ್ಥಳಕ್ಕಾಗಮಿಸಿ ನಾಯಿ ರಕ್ಷಿಸಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿ ಮಾಲೀಕ ಹಾಗೂ ಮತ್ತೋರ್ವ ವ್ಯಕ್ತಿ ವಿರುದ್ಧ ಡೆಂಕಣಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.