ಸ್ಥಳ ವಿವಾದ; ಸಹೋದರಿಗೆ ಕೊಡಲಿಯಿಂದ ಹೊಡೆದ ಭಯಾನಕ ದೃಶ್ಯ ‘ಮೊಬೈಲ್’ ನಲ್ಲಿ ಸೆರೆ

ಆಂಧ್ರ ಪ್ರದೇಶದ ಅನಂತಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಸಹೋದರಿಯೊಂದಿಗೆ ಸ್ಥಳ ವಿವಾದ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಗೆ ಕೊಡಲಿಯಿಂದ ಪದೇ ಪದೇ ಹೊಡೆದಿರುವ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅನಂತಪುರ ಜಿಲ್ಲೆಯ ಪೆನಕಚೆರ್ಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೆಹಬೂಬಿ ಎಂಬಾಕೆ ವಾಸಿಸುತ್ತಿದ್ದ ಜಾಗ ತನಗೆ ಸೇರಿದ್ದು ಎಂದು ಆಕೆಯ ಸಹೋದರ ಜಿಲಾನಿ ಆಗಾಗ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ.

ಈ ವಿವಾದ ಇತ್ತೀಚೆಗೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಜಿಲಾನಿ ಕೊಡಲಿಯಿಂದ ತನ್ನ ಹಿರಿಯ ಸಹೋದರಿ ಮೆಹಬೂಬಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರರು ಕಿರುಚಿಕೊಂಡರೂ ಸಹ ಆತ ಲೆಕ್ಕಿಸಿಲ್ಲ.

ಆಕೆಯ ಕಾಲಿಗೆ, ಬೆನ್ನಿಗೆ ಕೊಡಲಿಯಿಂದ ಜಿಲಾನಿ ಹೊಡೆದಿದ್ದು, ತಪ್ಪಿಸಿಕೊಳ್ಳಲು ಎಷ್ಟೇ ಯತ್ನಿಸಿದರೂ ಬಿಟ್ಟಿಲ್ಲ. ಕೊನೆಗೂ ಆತನನ್ನು ಕೆಳಕ್ಕೆ ಬೀಳಿಸಿ ಕೊಡಲಿ ಕಿತ್ತುಕೊಂಡಿದ್ದು, ಅಷ್ಟರಲ್ಲಾಗಲೇ ಮೆಹಬೂಬಿ ಸಾಕಷ್ಟು ಗಾಯಗೊಂಡಿದ್ದಳು.

ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ಹಲ್ಲೆಯ ದೃಶ್ಯವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಮೆಹಬೂಬಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

https://twitter.com/vani_mehrotra/status/1810929125164732730?ref_src=twsrc%5Etfw%7Ctwcamp%5Etweetembed%7Ctwterm%5E1810929125164732730%7Ctwgr%5E9594a7960f1e8cd21a1956aebd2c2743a9d0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read