ರೋಡ್ ಶೋ ವೇಳೆ ಕಲ್ಲು ತೂರಾಟದಲ್ಲಿ ಆಂಧ್ರ ಸಿಎಂ ಜಗನ್ ರೆಡ್ಡಿ ಗಾಯ

ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ, ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ವಿಜಯವಾಡದಲ್ಲಿ ಶನಿವಾರ ರೋಡ್‌ ಶೋ ನಡೆಸುವ ವೇಳೆ ಅಪರಿಚಿತರಿಂದ ಕಲ್ಲು ತೂರಾಟ ನಡೆಸಿದ್ದರಿಂದ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಅವರ ಎಡಭಾಗದಲ್ಲಿ ಕಣ್ಣಿನ ಮೇಲೆ ಸಣ್ಣ ಗಾಯವಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಡದ ಸಿಂಗ್ ನಗರದಲ್ಲಿರುವ ವಿವೇಕಾನಂದ ಸ್ಕೂಲ್ ಸೆಂಟರ್‌ನಲ್ಲಿ ಬಸ್ ಯಾತ್ರೆ ಭಾಗವಾಗಿ ರೋಡ್ ಶೋ ನಡೆಸುವಾಗ ಸಿಎಂ ಮೇಲೆ ಕಲ್ಲು ತೂರಿ ಬಂದಿದೆ ಎಂದು ಮುಖ್ಯಮಂತ್ರಿ ಕಚೇರಿ(ಸಿಎಂಒ) ಹೇಳಿಕೆ ತಿಳಿಸಿದೆ.

ವೈಎಸ್‌ಆರ್‌ಸಿಪಿ ಮುಖ್ಯಸ್ಥರು ತಮ್ಮ ‘ಮೇಮಂತ ಸಿದ್ಧಂ’(ನಾವೆಲ್ಲರೂ ಸಿದ್ಧರಿದ್ದೇವೆ) ಚುನಾವಣಾ ಪ್ರಚಾರ ಪ್ರವಾಸದ ವೇಳೆ ಬಸ್‌ನ ಮೇಲೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರಿಗೆ ಕಲ್ಲು ಹೊಡೆದ ನಂತರ, ಪಕ್ಕದಲ್ಲಿರುವ ಜನ ಆರಂಭದಲ್ಲಿ ಕರವಸ್ತ್ರದಿಂದ ಅವನ ಹಣೆಯನ್ನು ಒರೆಸುವುದನ್ನು ಕಾಣಬಹುದು. ಕೂಡಲೇ ವೈದ್ಯರು ಬಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಜಗನ್ ನಗರದಲ್ಲಿ ತಮ್ಮ ಪ್ರವಾಸವನ್ನು ಪುನರಾರಂಭಿಸಿದರು.

ಕವಣೆಯಂತ್ರದಿಂದ ಕಲ್ಲು ಬೀಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ “ದಾಳಿಯ” ಹಿಂದೆ ತೆಲುಗು ದೇಶಂ ಪಕ್ಷ(ಟಿಡಿಪಿ) ಕೈವಾಡವಿದೆ ಎಂದು ವೈಎಸ್‌ಆರ್‌ಸಿಪಿ ನಾಯಕರು ಆರೋಪಿಸಿದ್ದಾರೆ.

ರೆಡ್ಡಿ ಅವರು ಕಡಪ ಜಿಲ್ಲೆಯ ಇಡುಪುಲುಪಾಯದಿಂದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರದವರೆಗೆ 21 ದಿನಗಳ ಚುನಾವಣಾ ಪ್ರಚಾರ ಬಸ್ ಪ್ರವಾಸ ಕೈಗೊಂಡಿದ್ದಾರೆ.

ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

https://twitter.com/PTI_News/status/1779179586791624810

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read