ವೇಶ್ಯಾವಾಟಿಕೆ ಹೆಸರಲ್ಲಿ ಸ್ಪಾ ಮಾಲೀಕನ ಸುಲಿಗೆ ಯತ್ನ: ಇಬ್ಬರು ಅರೆಸ್ಟ್: ನಿರೂಪಕಿ ನಾಪತ್ತೆ

ಬೆಂಗಳೂರು: ಇಂದಿರಾ ನಗರದ ಸ್ಪಾ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂಪಾಯಿ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ರಾಜ್ ನ್ಯೂಸ್ ಸುದ್ದಿ ವಾಹಿನಿ ಸಿಇಒ ರಾಜಾನುಕುಂಟೆ ವೆಂಕಟೇಶ್ ಸೇರಿ ಇಬ್ಬರನ್ನು ಜಿ.ಬಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜ್ ನ್ಯೂಸ್ ಸುದ್ದಿ ವಾಹಿನಿ ನಿರೂಪಕಿ ದಿವ್ಯಾ ವಸಂತ ಸೋದರ ಸಂದೇಶ್ ನನ್ನು ಕೂಡ ಬಂಧಿಸಿ ಬಂಧಿತರಿಂದ 3 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕೃತ್ಯ ಬೆಳಕಿಗೆ ಬಂದ ನಂತರ ನಿರೂಪಕಿ ದಿವ್ಯಾ ವಸಂತ, ಸಚಿನ್, ಆಕಾಶ್ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ವ್ಯವಸ್ಥಾಪಕ ಶಿವಶಂಕರ್ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ಈ ತಂಡ ಯತ್ನಿಸಿತ್ತು. ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಿದ್ದಾರೆ.

ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಂದೇಶ್ ಚಿತ್ರೀಕರಿಸಿದ್ದ ವಿಡಿಯೋವನ್ನು ಸ್ವಾ ವ್ಯವ್ಯವಸ್ಥಾಪನಿಗೆ ತೋರಿಸಿ ವೆಂಕಟೇಶ್ ಬೆದರಿಸಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೊನೆಗೆ 8 ಲಕ್ಷ ಕೊಡುವಂತೆ ಒತ್ತಾಯಿಸಿದ್ದರು. ಸ್ಪಾ ವ್ಯವಸ್ಥಾಪಕ ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ಕರೆಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read