ಒಂಟಿಯಾಗಿ ಅಟ್ಲಾಂಟಿಕ್ ಸಾಗರವನ್ನು ದಾಟುವ ಸಾಹಸಕ್ಕೆ ಮುಂದಾದ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಮೊಮ್ಮಗಳು!

ಇಂಗ್ಲೆಂಡ್ ನ ಶೆಫೀಲ್ಡ್ ನಲ್ಲಿ ನೆಲೆಸಿರುವ ರಾಷ್ಟ್ರ ಕವಿ ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಒಂಟಿಯಾಗಿ ದೋಣಿಯಲ್ಲಿ ಹುಟ್ಟು ಹಾಕಿಕೊಂಡು ಅಟ್ಲಾಂಟಿಕ್ ಸಾಗರವನ್ನು ದಾಟುವ ಸಾಹಸವನ್ನು ಆರಂಭಿಸಿದ್ದಾರೆ.

ಡಿ. 12ರಂದು ಆಫ್ರಿಕಾದ ವಾಯುವ್ಯ ಕರಾವಳಿಯಲ್ಲಿರುವ ಕ್ಯಾನರಿ ದ್ವೀಪದಿಂದ ಬೋಟ್ ನಲ್ಲಿ ಯಾನ ಆರಂಭಿಸಿದ್ದು, ಅಂತಿಮವಾಗಿ ಆಂಟಿಗುವಾವವನ್ನು ತಲುಪಲಿದ್ದಾರೆ.‌ 34 ವರ್ಷದ ಅನನ್ಯ 3000 ಮೈಲಿ (4828ಕಿಮೀ) ಅಂತರವನ್ನು ಒಂಟಿಯಾಗಿ ಯಾನ ಮಾಡಲಿದ್ದಾರೆ. ಇದಕ್ಕಾಗಿಯೇ ಸಿದ್ಧ ಪಡಿಸಿರುವ 25 ಅಡಿ ಉದ್ದದ ದೋಣಿಯಲ್ಲಿ ಅಂದಾಜು 60-80 ದಿನಗಳ ಕಾಲ ಕಡಲ ಯಾನ ಮಾಡುವುದು ನಿಜವಾಗಿಯೂ ಸವಾಲಾಗಿದೆ.

BBC ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅನನ್ಯ, ಬೆಂಗಳೂರಿನಲ್ಲಿರುವ “ದೀನಬಂಧು ಟ್ರಸ್ಟ್” ಗೆ ನಿಧಿ ಸಂಗ್ರಹ ಮಾಡುವುದು ಕೂಡ ಈ ಸಾಹಸದ ಮತ್ತೊಂದು ಉದ್ದೇಶ” ಎಂದಿದ್ದಾರೆ.‌

ಅಜ್ಜನ ಹಾಡಿನಂತೆ ಮೊಮ್ಮಗಳು, ‘ಕಾಣದ ಕಡಲಿಗೆ ಹಂಬಲಿಸಿ ಸಾಗಿದ್ದಾಳೆ… ‘ ಯಶಸ್ಸು ಸಿಗಲಿ ಎಂಬುದು ಎಲ್ಲರ ಹಾರೈಕೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read