ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ತಮ್ಮ ಬ್ಯಾಟಿಂಗ್ ನಿಂದ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಐಪಿಎಲ್ 2024ರಲ್ಲಿ ರಿಯಾನ್ ಪರಾಗ್ 16 ಪಂದ್ಯಗಳಿಂದ ಒಟ್ಟು 573 ರನ್ ಗಳಿಸಿದ್ದು, ಈ ಪೈಕಿ ನಾಲ್ಕು ಅರ್ಧ ಸೆಂಚುರಿ ಇದ್ದವು. ಅಂದರೆ ಸರಾಸರಿ 52 ರನ್ ಗಳನ್ನು ಅವರು ಗಳಿಸಿದ್ದರು. ಈ ಕಾರಣಕ್ಕಾಗಿ ಅವರು ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದರು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಿಯಾನ್ ಪರಾಗ್ ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಕ್ವಾಲಿಫೈಯರ್ 2 ಹಂತದಲ್ಲಿ ನಿರ್ಗಮಿಸಿದ್ದು, ಆದರೆ ಇದೀಗ ರಿಯಾನ್ ಬೇರೊಂದು ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು ಅದರಲ್ಲಿ ರಿಯಾನ್ ಕಂಪ್ಯೂಟರ್ ಮುಂದೆ ಕುಳಿತಿದ್ದಾರೆ. ಇದರ ಜೊತೆಗೆ ಯೂಟ್ಯೂಬ್ ನಲ್ಲಿ ‘ಅನನ್ಯ ಪಾಂಡೆ ಹಾಟ್’, ‘ಸಾರಾ ಅಲಿ ಖಾನ್ ಹಾಟ್’ಎಂದು ಸರ್ಚ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವಿಡಿಯೋ ಎಷ್ಟು ಸತ್ಯ ಅಥವಾ ಸುಳ್ಳು ಎಂಬುದು ತಿಳಿದು ಬಂದಿಲ್ಲ. ಆಟಗಾರನ ಹೆಸರನ್ನು ಹಾಳು ಮಾಡಲು ಕೆಲವರು ಬೇಕೆಂದೇ ಈ ವಿಡಿಯೋವನ್ನು ಮಾಡಿರುವ ಸಾಧ್ಯತೆ ಇದೆ.
https://twitter.com/KohliMyHeart/status/1795062865092542742?ref_src=twsrc%5Etfw%7Ctwcamp%5Etweetembed%7Ctwterm%5E1795062865092542742%7Ctwgr%5E9e75df493426156aca89e390d8d5dca427977086%7Ctwcon%5Es1_&ref_url=h
https://twitter.com/DhruvRatheeAAP/status/1795090644685168873?ref_src=twsrc%5Etfw%7Ctwcamp%5Etweetembed%7Ctwterm%5E1795090644685168873%7Ctwgr%5E2fd5519227784084c0fb6067c45c0f91ba42783a%7Ctwcon%5Es1_&ref_url=https%3A%2F%2