ಪಫರ್ ಜಾಕೆಟ್ ಮಡಿಸುವುದು ಹೇಗೆ ಎಂದು ಹೇಳಿಕೊಟ್ಟ ಮಹಿಳೆ; ವಿಡಿಯೋ ವೈರಲ್

ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಹಲವಾರು ಕುತೂಹಲದ ವಿಷಯಗಳನ್ನು ಶೇ‌ರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವುಗಳ ಪೈಕಿ ಹಲವು ವಿಷಯಗಳು ಕುತೂಹಲಕಾರಿಯಾಗಿರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಪರಿಣಾಮಕಾರಿಯಾಗಿ ಪ್ಯಾಕ್ ಮಾಡುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ. ಅವಳು ಪಫರ್ ಜಾಕೆಟ್ ಅನ್ನು ಮಡಿಸುವ ಮೂಲಕ ಈ ವಿಡಿಯೋ ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ಇದರ ಪ್ಯಾಕ್‌ ಮಾಡುವಾಗ ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇದರ ಪ್ಯಾಕ್ ಮಾಡುವುದು ಕಷ್ಟಕರವಾದ ವಿಷಯಗಳಲ್ಲಿ ಒಂದಾಗಿದೆ.

ಆದರೆ ಮಹಿಳೆ ಕಡಿಮೆ ಜಾಗದಲ್ಲಿ ಅದನ್ನು ಹೇಗೆ ಪ್ಯಾಕ್‌ ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ. ಬಟ್ಟೆಗಳು ಅನಿಯಮಿತ ಆಕಾರಗಳನ್ನು ಹೊಂದಿರುವ ವಸ್ತುಗಳು. ಸೂಟ್‌ಕೇಸ್‌ಗಳು ಮತ್ತು ಬ್ಯಾಗ್‌ಗಳಲ್ಲಿ ಹೊಂದಿಕೊಳ್ಳಲು ಅವುಗಳನ್ನು ವಿಶೇಷ ರೀತಿಯಲ್ಲಿ ಪ್ಯಾಕ್‌ ಮಾಡಬೇಕಾಗುತ್ತದೆ ಎನ್ನುತ್ತಾರೆ ಈಕೆ. ಈ ವಿಡಿಯೋ 1.6 ಮಿಲಿಯನ್ ಮಂದಿ ನೋಡಿದ್ದು ಶ್ಲಾಘಿಸಿದ್ದಾರೆ.

https://twitter.com/Satish_Samoa/status/1631247110002688001?ref_src=twsrc%5Etfw%7Ctwcamp%5Etweetembed%7Ctwterm%5E1631247110002688001%7Ctwgr%5E92efecc10ddef310376c55363a7f620a2213964d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-video-of-woman-showing-how-to-pack-efficiently-internet-is-amazed-2341818-2023-03-02

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read