ಕಾಡಾನೆಗಳು ದಾಂಗುಡಿ ಇಟ್ಟಾಗ ಆಗೋ ಅಲ್ಲೋಲಕಲ್ಲೋಲ ಅಷ್ಟಿಷ್ಟಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅಂತಹ ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಈಗ ಮತ್ತೆ ಅಂತಹದೇ ವಿಡಿಯೋ ಒಂದು ವೈರಲ್ ಆಗಿದೆ. ಅದೇ ವಿಡಿಯೋವನ್ನ ಮಹೀಂದ್ರ ಗ್ರೂಪ್ ಕಂಪನಿ ಮಾಲೀಕರಾದ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆಸ್ಸಾಂನ ಗುವಾಹಟಿಯ ವಿಡಿಯೋ ಇದಾಗಿದ್ದು, ಇಲ್ಲಿ ಆನೆಯೊಂದು ನಡುರಸ್ತೆಯಲ್ಲಿ ವಾಹನವೊಂದಕ್ಕೆ ಗುದ್ದಿದೆ. ಇಷ್ಟೇ ಆಗಿದ್ದರೆ ಪರವಾಗಿರ್ಲಿಲ್ಲ. ಅದೇ ವಾಹನವನ್ನ ಆ ಆನೆ ಅಲ್ಲೇ ತಳ್ಳಿ ಉರುಳಿಸಿದೆ. ಈ ವಿಡಿಯೋ ಆನಂದ್ ಮಹೀಂದ್ರ ಅವರ ಗಮನ ಸೆಳೆದಿದೆ. ಅವರು ಈ ವಾಹನದಲ್ಲಿರುವ ಚಾಲಕನ ಪರಿಸ್ಥಿತಿ ಹೇಗಾಗಿರಬೇಡ ಅಂತ ಚಿಂತೆ ವ್ಯಕ್ತಪಡಿಸಿದ್ದಾರೆ. ವಾಹನವನ್ನ ಸಿದ್ಧಪಡಿಸುವಾಗ ಈ ರೀತಿಯ ಅವಘಡಗಳು ಕೂಡ ಸಂಭವಿಸುತ್ತೆ ಅನ್ನೊ ಕಲ್ಪನೆ ನಮಗೆ ಇರುವುದಿಲ್ಲ ಅಂತ ತಮ್ಮ ಅನಿಸಿಕೆಯನ್ನ ಹೇಳಿದ್ದಾರೆ.
ಆನೆಯ ಪುಂಡಾಟವನ್ನ ನೋಡಿ, ಅಪಾಯ ಇದೆ ಅನ್ನೋದನ್ನ ಅರಿತ ಚಾಲಕ ತನ್ನ ವಾಹನವನ್ನ ಹಿಂದೆ ತೆಗೆದುಕೊಂಡು ಆನೆಯಿಂದ ದೂರ ಉಳಿಯುವುದಕ್ಕೆ ನೋಡುತ್ತಾನೆ. ಆದರೆ ಅಷ್ಟರೊಳಗೆ, ಆನೆ ದಾಳಿ ನಡೆಸಿಬಿಟ್ಟಿರುತ್ತೆ.
ಈ ವಿಡಿಯೋ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ ಅವರು, ಕ್ಯಾಪ್ಷನ್ನಲ್ಲಿ “ಚಾಲಕ ಸುರಕ್ಷಿತನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ. ಡ್ರೈವರ್ ಆನೆಯನ್ನ ಕಂಡಾಕ್ಷಣವೇ ಲಾರಿಯಿಂದ ಇಳಿದು ಓಡಿ ಹೋಗಿದ್ದಾನೆ. ನಾವು ವಾಹನಗಳನ್ನು ತಯಾರಿಸುವಾಗ ಈ ರೀತಿಯ ಅಪಾಯಗಳು ಎದುರಾಗಬಹುದು ಅನ್ನೋದನ್ನ ಪ್ಲಾನ್ ಮಾಡಿರುವುದಿಲ್ಲ.” ಎಂದು ಬರೆದಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು, ಆನೆ ಮಾಡಿರುವ ದಾಳಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೆಲವರಂತೂ ಆನೆ ಇರುವ ಪ್ರದೇಶದತ್ತ ಹೋಗುವುದೇ ಅಪಾಯ ಎಂದು ಕಾಮೆಂಟ್ ಬಾಕ್ಸ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
#Assam: Another instance of wild elephant attack took place in Narengi area of Guwahati on January 14. pic.twitter.com/4zuNOzgqBL
— India Today NE (@IndiaTodayNE) January 14, 2023