Watch Video | ಮೊಸಳೆಯಿಂದ ಜಿಂಕೆ ಬೇಟೆ; ಮೈ ಝುಂ ಎನ್ನುವ ಕುತೂಹಲದ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ಸದಾ ಪ್ರೇರಣಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್‌ಗಳು ಜೀವನ-ಪಾಠಗಳನ್ನು ಒಳಗೊಂಡಿರುತ್ತವೆ, ಅದು ಸಾಕಷ್ಟು ಸ್ಫೂರ್ತಿದಾಯಕವೂ ಆಗಿರುತ್ತದೆ. ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ ಮತ್ತು ಜಿಂಕೆಯನ್ನು ಒಳಗೊಂಡಿರುವ ವೀಡಿಯೊವನ್ನು ಶೇರ್​ಮಾಡಿದ್ದಾರೆ.

‘ಕ್ಲಿಪ್ಸ್ ದಟ್ ಗೋ ಹಾರ್ಡ್’ ಎಂಬ ಟ್ವಿಟ್ಟರ್ ಖಾತೆಯಿಂದ ಮೊದಲು ಪೋಸ್ಟ್ ಮಾಡಲಾದ 12-ಸೆಕೆಂಡ್ ಕ್ಲಿಪ್ ಅನ್ನು ಆನಂದ್ ಮಹೀಂದ್ರಾ ಅವರು “ರಿಫ್ಲೆಕ್ಸ್‌ಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಆಯಸ್ಸು ಗಟ್ಟಿಯಿದ್ದರೆ ಯಾವ ಕ್ಷಣದಲ್ಲಾದರೂ ಪಾರಾಗಬಹುದು ಎನ್ನುವ ಅರ್ಥವನ್ನು ಇದು ಒಳಗೊಂಡಿದೆ.

ಇದರಲ್ಲಿ ಜಿಂಕೆ ನದಿಯ ಬಳಿ ನೀರು ಕುಡಿಯುತ್ತಿದ್ದಾಗ ಅದರ ಮೇಲೆ ಮೊಸಳೆ ದಾಳಿ ಮಾಡುವುದನ್ನು ತೋರಿಸುತ್ತದೆ. ಭಯಾನಕ ವೀಡಿಯೊವನ್ನು ನೋಡಿದ ನಂತರ ಆನಂದ್​ ಮಹೀಂದ್ರಾ ಅವರ ಮಾತುಗಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ. ಏಕೆಂದರೆ ಮೊಸಳೆ ಬರುತ್ತಿರುವ ಸುಳಿವು ಸಿಗುತ್ತಲೇ ಜಿಂಕೆ ಕೂಡಲೇ ಕಾರ್ಯಪ್ರವೃತ್ತವಾಗಿ ಓಡಿಹೋಗಿ ಜೀವ ಉಳಿಸಿಕೊಂಡಿತು.

ಆನಂದ್ ಮಹೀಂದ್ರಾ ಅವರ ಪೋಸ್ಟ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಕೂಡಲೇ ಹಲವಾರು ಇಷ್ಟಗಳು ಮತ್ತು ರಿಟ್ವೀಟ್‌ಗಳನ್ನು ಗಳಿಸಿತು. ಅವರ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

https://twitter.com/anandmahindra/status/1665600633590755328?ref_src=twsrc%5Etfw%7Ctwcamp%5Etweetembed%7Ctwterm%5E166560

https://twitter.com/amit6060/status/1665607651500216322?ref_src=twsrc%5Etfw%7Ctwcamp%5Etweetembed%7Ctwterm%5E1665607651500216322%7Ctwgr%5E6c35fd5b456a5045a42bf9d882025db89b8f6424%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-terrifying-video-of-crocodile-attacking-deer-what-happens-next-is-a-life-lesson-2389030-2023-06-05

https://twitter.com/thevibhu90/status/1665608003414884353?ref_src=twsrc%5Etfw%7Ctwcamp%5Etweetembed%7Ctwterm%5E1665608003414884353%7Ctwgr%5E6c35fd5b456a5045a42bf9d882025db89b8f6424%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-terrifying-video-of-crocodile-attacking-deer-what-happens-next-is-a-life-lesson-2389030-2023-06-05

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read