Watch: ʼನಾಟು…… ನಾಟು……ʼ ಹಾಡಿಗೆ ಸೈಪ್ ಹಾಕಿದ ಉದ್ಯಮಿ ಆನಂದ್ ಮಹೀಂದ್ರಾ; ಸೈಪ್ಸ್ ಹೇಳಿಕೊಟ್ಟ ನಟ ರಾಮ್‌ ಚರಣ್

ಆರ್ ಆರ್ ಆರ್ ಸಿನೆಮಾದ ನಾಟು….. ನಾಟು…… ಹಾಡು ಯಾರಿಗೆ ಇಷ್ಟ ಆಗೋಲ್ಲ ಹೇಳಿ, ಅದರಲ್ಲೂ ನಟ ರಾಮ್‌ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಮಾಡಿದ್ದ ಸೈಪ್‌ಗಳಿಗೆ ಅಭಿಮಾನಿಗಳು ಫಿದಾ ಆಗೋಗಿದ್ದರು. ಇದೇ ಹಾಡಿನ ಸ್ಟೆಪ್ಸ್ ನ್ನ ಈಗ ನಟ ರಾಮ್‌ಚರಣ್ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ಕಲಿಸಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಆನಂದ್ ಮಹೀಂದ್ರಾ ಅವರು ರಾಮ್‌ಚರಣ್‌ ಅವರಿಂದ ನಾಟು ನಾಟು ಹಾಡಿನ ಹುಕ್ಅಪ್ ಸೈಪ್ಸನ್ನ ಖುಷಿ-ಖುಷಿಯಾಗಿ ಕಲಿಯುತ್ತಿರುವುದನ್ನ ನೋಡಬಹುದು.

ಹೈದರಾಬಾದ್ ಇ-ಪಿಕ್ಸ್‌ನಲ್ಲಿ ಇಬ್ಬರೂ ಈ ರೀತಿ ಒಟ್ಟಿಗೆ ನೃತ್ಯ ಮಾಡುವುದು ಗಮನಕ್ಕೆ ಬಂದಿದೆ. ಡಾನ್ಸ್ ನಂತರ ಇಬ್ಬರೂ ಅಪ್ಪಿಕೊಂಡು ಖುಷಿ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು.

ನಟ ರಾಮ್ ಚರಣ್ ಅವರಿಂದ `ನಾಟು ನಾಟು’ ಹಾಡಿನ ಬೇಸಿಕ್ ಸೈಪ್ ಕಲಿತೆ. ಧನ್ಯವಾದಗಳು ಮತ್ತು ಆಸ್ಕರ್‌ಗೆ ಶುಭವಾಗಲಿ ನನ್ನ ಗೆಳೆಯ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಸೋಶಿಯಲ್ ಮಿಡಿಯಾದಲ್ಲಿ ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು, ಆನಂದ್ ಮಹೀಂದ್ರಾ ಅವರು ಖುಷಿ ಖುಷಿಯಾಗಿ ಡಾನ್ಸ್ ಮಾಡುತ್ತಿರುವುದನ್ನ ನೋಡಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ನಟ ರಾಮ್‌ಚರಣ್ ಅವರ ಸರಳತೆಗೆ ಫಿದಾ ಆಗೋಗಿದ್ದಾರೆ.

https://twitter.com/anandmahindra/status/1624375994265255937

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read