ಇದು ಐಷಾರಾಮಿ ಕಾರಲ್ಲ……ಓಪನ್ ಟಾಪ್ ಮಾರುತಿ ಸುಜುಕಿ 800….!

ಓಪನ್ ಟಾಪ್ ಕಾರು ತೆಗೆದುಕೊಳ್ಳಬೇಕಿದ್ದರೆ ನೀವು ಕೋಟ್ಯದಿಪತಿಯೇ ಆಗಿರಬೇಕು. ಯಾಕೆಂದರೆ ಅದರ ಬೆಲೆ 30 ಲಕ್ಷ ರೂ.ಗಿಂತ ಹೆಚ್ಚಿರುತ್ತದೆ. ಆದರೆ, ಫರಿದಾಬಾದ್ ನಲ್ಲಿ ಮಾರುತಿ ಸುಜುಕಿ 800 ಮಾದರಿಯ ಓಪನ್ ಟಾಪ್ ಕಾರು ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿದೆ.

ಅದ್ವೈತ್ ಸಿಂಗ್ ಪಿಲಾನಿಯಾ ಎಂಬ ಬಳಕೆದಾರರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಳಿ ಬಣ್ಣದ ಓಪನ್ ಟಾಪ್ ಮಾರುತಿ 800 ಕಾರನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಕಾರು ಚಾಲಕನ ವಿನೂತನ ಪ್ರಯತ್ನ ಕಂಡು ನೆಟ್ಟಿಗರು ಕೂಡ ತಲೆದೂಗಿದ್ದಾರೆ. ನಮ್ಮ ದೇಶದಲ್ಲಿ ಎಂತೆಂಥ ಪ್ರತಿಭೆಗಳಿದ್ದಾರೆ ಎಂದು ಹೇಳುತ್ತಾ ತಮಾಷೆಯ ಮಾತುಗಳನ್ನಾಡಿದ್ದಾರೆ.

ತೆರೆದ ಛಾವಣಿಯ (ಓಪನ್ ಟಾಪ್) ಕಾರುಗಳು ಹೆಚ್ಚಾಗಿ ಐಷಾರಾಮಿ, ಟಾಪ್-ಎಂಡ್ ಕಾರುಗಳಲ್ಲಿ ಲಭ್ಯವಿದ್ದರೂ, ಈ ಮಾಲೀಕರು ಮಾತ್ರ ಬಹಳ ಕಡಿಮೆ ವೆಚ್ಚದ ಕಾರಿನಲ್ಲಿ ಇದನ್ನು ಆನಂದಿಸುತ್ತಿರುವುದು ವಿಸ್ಮಯವೇ ಸರಿ. ಅಂದಹಾಗೆ, 31 ವರ್ಷಗಳ ಪಯಣದ ನಂತರ ಮಾರುತಿ 800 ಅನ್ನು ಭಾರತದಲ್ಲಿ ಕಾರು ತಯಾರಕರು 2014 ರಲ್ಲಿ ತಯಾರಿಕೆಯನ್ನು ನಿಲ್ಲಿಸಿದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read