ಈ ಪುರಾತನ ಶಿವ ದೇವಾಲಯದಲ್ಲಿ ನಡೆದಿತ್ತು ವಿಸ್ಮಯಕಾರಿ ಘಟನೆ; ಭಗವಂತನೆದುರು ಬ್ರಿಟಿಷರು ಸಹ ತಲೆಬಾಗುವಂತಹ ಅಚ್ಚರಿ….!

ಗಾಜಿಪುರದ ದೇವಕಲಿ ಗ್ರಾಮದಲ್ಲಿರೋ ಶಿವನ ಮಂದಿರ ಪವಾಡ ಸ್ಥಳವೆಂದೇ ಹೆಸರಾಗಿದೆ. ಪುರಾತನ ದೇವಾಲಯದಲ್ಲಿ ಹರಕೆ ಹೊತ್ತರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಸ್ವಯಂಘೋಷಿತ ಶಿವಲಿಂಗವಿದೆ ಎಂದು ಹೇಳಲಾಗುತ್ತದೆ. ಇದು ಬ್ರಿಟಿಷರ ಕಾಲದ ದೇವಾಲಯ.

ಶ್ರಾವಣ ಮಾಸದಲ್ಲಿ ದೂರದ ಊರುಗಳಿಂದ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ಅಷ್ಟೇ ಅಲ್ಲ ದೇವಸ್ಥಾನ ಸಮಿತಿ ಭಕ್ತರಿಗೆಂದೇ ಜಲಾಭಿಷೇಕ ಸ್ಪರ್ಧೆ ಕೂಡ ಏರ್ಪಡಿಸುತ್ತದೆ. ಬ್ರಿಟಿಷರ ಕಾಲದಲ್ಲಿ ಈ ದೇವಸ್ಥಾನದ ಬಳಿ ರೈಲು ಮಾರ್ಗವನ್ನು ಹಾಕಲಾಗುತ್ತಿತ್ತು. ಈ ರೈಲು ಮಾರ್ಗ ನಿರ್ಮಾಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ರೈಲು ಮಾರ್ಗವನ್ನು ಬೇರೆ ಕಡೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧರಿರಲಿಲ್ಲ.

ಶಿವನಿಗೆ ಶಕ್ತಿ ಇದ್ದರೆ ದೇವಸ್ಥಾನದ ಬಾಗಿಲು ಬೇರೆ ದಿಕ್ಕಿನಲ್ಲಿ ತೆರೆಯಲಿ ಎಂದು ಸಿಬ್ಬಂದಿ ಮತ್ತು ಅಧಿಕಾರಿಗಳು ಸವಾಲು ಹಾಕಿದ್ದರು. ಅದೇ ದಿನ ರಾತ್ರಿ ಈ ದೇವಾಲಯದಲ್ಲಿ ಪವಾಡವೇ ನಡೆದು ಹೋಯ್ತು. ದೇವಾಲಯದ ಗೋಡೆಯು ಪೂರ್ವದಿಂದ ಪಶ್ಚಿಮಕ್ಕೆ ತೆರೆದುಕೊಂಡಿತು.

ನಂತರ ದೇವಾಲಯದ ಬಾಗಿಲುಗಳು ಪಶ್ಚಿಮಕ್ಕೆ ತಿರುಗಿದವು. ದೇವಾಲಯದಲ್ಲಿ ನಡೆದ ಈ ಘಟನೆಯಿಂದ ಬ್ರಿಟಿಷರೂ ಆಶ್ಚರ್ಯಚಕಿತರಾದರು, ಬಳಿಕ ಭಗವಂತನ ಎದುರು ತಲೆಬಾಗಿದರು. ನಂತರ ಬ್ರಿಟಿಷ್ ಅಧಿಕಾರಿಗಳ ಆದೇಶದ ಮೇರೆಗೆ ರೈಲು ಮಾರ್ಗವನ್ನು ಬದಲಾಯಿಸಲಾಯ್ತು. ದೇವಸ್ಥಾನದ ಪೂರ್ವಕ್ಕೆ ರೈಲು ಮಾರ್ಗವನ್ನು ತಿರುಗಿಸಲಾಯಿತು.

ಶ್ರಾವಣ ಮಾಸದಲ್ಲಿ ನಡೆಯುವ ಜಲಾಭಿಷೇಕದಲ್ಲಿ ಭಕ್ತರು ಸ್ನಾನದ ನಂತರ ಗಹ್ಮಾರ್‌ನ ನರ್ವ ಗಂಗಾ ಘಾಟ್‌ನಿಂದ ನೀರನ್ನು ತೆಗೆದುಕೊಳ್ಳುತ್ತಾರೆ. ಯಾರು ಮೊದಲು ಹೋಗಿ ಶಿವನಿಗೆ ಜಲಾಭಿಷೇಕ ಮಾಡುತ್ತಾರೋ ಅವರನ್ನೇ ವಿಜಯಿ ಎಂದು ಘೋಷಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read