ಮೆದುಳಿಗೆ ಉತ್ತಮ ಮಧ್ಯಾಹ್ನದ ʼಕಿರು ನಿದ್ರೆʼ

ಸಾಮಾನ್ಯವಾಗಿ ಮಧ್ಯಾಹ್ನದ ಊಟವಾಗ್ತಿದ್ದಂತೆ ನಿದ್ರೆ ಬರುವುದು ಸಾಮಾನ್ಯ. ಅನೇಕರು 30ರಿಂದ 40 ನಿಮಿಷಗಳ ಕಾಲ ನಿದ್ರೆ ಮಾಡುತ್ತಾರೆ. ಅನೇಕ ಜನರು ಮಧ್ಯಾಹ್ನ ಮಾಡುವ 10ರಿಂದ 30 ನಿಮಿಷದ ನಿದ್ರೆಯನ್ನು ಪವರ್ ನ್ಯಾಪ್ ಎಂದು ಕರೆಯುತ್ತಾರೆ.

ಆದ್ರೆ ಬಹುತೇಕರು ಊಟದ ನಂತ್ರ ನಿದ್ರೆ ಮಾಡುವುದಿಲ್ಲ. ಇದು ಮೂಡ್ ಹಾಳು ಮಾಡುತ್ತದೆ, ಚೈತನ್ಯ ಕಡಿಮೆ ಮಾಡುತ್ತದೆ, ಆರೋಗ್ಯ ಹಾಳು ಮಾಡುತ್ತದೆ ಎಂದು ಭಾವಿಸಿದ್ದಾರೆ. ಆದ್ರೆ ಸಂಶೋಧನೆಯೊಂದು ಮಧ್ಯಾಹ್ನದ ಸಣ್ಣ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದಿದೆ.

ಊಟದ ನಂತರದ ನಿದ್ರೆ ಮೆದುಳಿಗೆ ಪ್ರಯೋಜನಕಾರಿ. ಎಂದು ಸಂಶೋಧನೆ ಹೇಳಿದೆ. ವಯಸ್ಸಾದವರಿಗೆ ಮಧ್ಯಾಹ್ನ ಕಿರು ನಿದ್ರೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಎಷ್ಟು ಹೊತ್ತು ಮಲಗುತ್ತೀರಿ ಎಂಬುದು ಇಲ್ಲಿ ಮಹತ್ವ ಪಡೆಯುತ್ತದೆ. 30 ರಿಂದ 90 ನಿಮಿಷಗಳ ಕಿರು ನಿದ್ದೆ ಮೆದುಳಿನ ಕಾರ್ಯಗಳಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಆದರೆ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡುವುದು ಯೋಚಿಸುವ ಸಾಮರ್ಥ್ಯ, ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ಸ್ಮರಣೆ  ಕಾಪಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧ್ಯಾಹ್ನದ ನಿದ್ರೆ ಎಲ್ಲರಿಗೂ ಒಳ್ಳೆಯದು ಎನ್ನಲು ಸಾಧ್ಯವಿಲ್ಲ. ಇದು ವ್ಯಕ್ತಿಯ ಅಗತ್ಯತೆ ಮತ್ತು ಅವನ ಜೀವನ ಕ್ರಮ ಮತ್ತು ದೇಹದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read