BREAKING NEWS: ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯ: ಸಾಮಾನ್ಯ ಚಟುವಟಿಕೆ ಪುನರಾರಂಭ

ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಪಂಜಾಬ್ ನ ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯಗೊಂಡಿದೆ.

ಕದನ ವಿರಾಮ ಘೋಷಣೆ ಬಳಿಕವೂ ಪಂಜಾಬ್ ನ ಹಲವೆಡೆ ಸೈರನ್ ಸದ್ದು ಮೊಳಗಿತ್ತು. ಪಾಕ್ ಸೇನೆಯಿಂದ ದಾಳಿಯ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಮೃತಸರದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಯಾರೂ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು.

ಇದೀಗ ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯವಾಗಿದೆ. ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಸಾಮಾನ್ಯ ಚಟುವಟಿಕೆ ಪುನರಾರಂಭವಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read