ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಅಂಗಡಿ ವ್ಯಾಪಾರಿಯೊಬ್ಬ ಕಳ್ಳನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು ಅವನನ್ನು ಥಳಿಸಿದ್ದಾನೆ. ಜೋಯಾದಲ್ಲಿರುವ ಡಿಡೋಲಿ ಕೊತ್ವಾಲಿಯಲ್ಲಿ ಈ ಘಟನೆ ಸಂಭವಿಸಿದ್ದು ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಅಂಗಡಿಯವನು ಕಳ್ಳನನ್ನು ಬಂಧಿಸಿದ್ದಾನೆ.
ಕಳ್ಳನನ್ನು ಪೊಲೀಸರಿಗೆ ಒಪ್ಪಿಸುವ ಬದಲು ಅಂಗಡಿಯವನು ಸ್ವತಃ ಪರಿಸ್ಥಿತಿಯನ್ನು ನಿಭಾಯಿಸಲು ನಿರ್ಧರಿಸಿದ. ಕಳ್ಳನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ. ಸೆಪ್ಟೆಂಬರ್ 3 ರಂದು ಹೊರಬಿದ್ದ ವೀಡಿಯೊದಲ್ಲಿ ಅಂಗಡಿಯವನು ಕಳ್ಳನ ಮೇಲೆ ಕ್ರೂರವಾಗಿ ಹಲ್ಲೆ ಮಾಡುವುದನ್ನು ತೋರಿಸುತ್ತದೆ.
ಹಲ್ಲೆ ವೇಳೆ ಸಾರ್ವಜನಿಕರು ಮಧ್ಯಪ್ರವೇಶಿಸಿ ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದರು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನ ಮೇಲೆ ಅಂಗಡಿಯವನು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಿದೆ.
https://twitter.com/janabkhan08/status/1830864884789104980?ref_src=twsrc%5Etfw%7Ctwcamp%5Etweetembed%7Ctwterm%5E1830864884789104980%7Ctwgr%5E0b9241c251486cd226f39bd48990db2dfd4d3c66%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Famrohathiefcaughtredhandedbrutallyassaultedbyshopkeeperdisturbingvideo-newsid-n629318555