Video | ಅರ್ಧಂಬರ್ಧ ಟೀ ಶರ್ಟ್‌ ತೆಗೆದು ವಿದ್ಯಾರ್ಥಿನಿ ನೃತ್ಯ; ಇದು ಅಸಭ್ಯ‌ ವರ್ತನೆ ಎಂದ ಮಹಿಳೆಗೆ ನೆಟ್ಟಿಗರ ಕ್ಲಾಸ್

ಫ್ರೆಶರ್ಸ್ ಪಾರ್ಟಿಯಲ್ಲಿ ಅಮಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರ ನೃತ್ಯದ ವಿಡಿಯೋ ವೈರಲ್ ಆಗಿದ್ದು, ಟೀ ಶರ್ಟ್‌ ಅರೆಬರೆ ತೆರೆದ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿದೆ.

30-ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ವಿದ್ಯಾರ್ಥಿನಿಯು “ದಿಲ್ ದೂಬಾ” ಗೆ ವೇದಿಕೆಯ ಮೇಲೆ ನೃತ್ಯ ಮಾಡುವುದನ್ನು ತೋರಿಸುತ್ತದೆ, ಈ ಸಮಯದಲ್ಲಿ ಆಕೆ ತನ್ನ ಟಿ-ಶರ್ಟ್ ಅನ್ನು ಅರ್ಧಂಬರ್ಧ ತೆರೆದು ನೃತ್ಯ ಮುಂದುವರಿಸುತ್ತಾಳೆ.

ವಿಶ್ವವಿದ್ಯಾನಿಲಯದ ಫ್ರೆಶರ್ಸ್ ಪಾರ್ಟಿಯಲ್ಲಿ ಅಮಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮಾಡಿದ ಈ ನೃತ್ಯದ ವಿಡಿಯೋವನ್ನು ಮಹಿಳೆಯೊಬ್ಬರು ಹಂಚಿಕೊಂಡು ವಿದ್ಯಾರ್ಥಿನಿಯ ಅಭಿನಯದ ವಿರುದ್ಧ ಕಟುವಾದ ಪೋಸ್ಟ್ ಹಾಕಿದ್ದಾರೆ. ಬಳಿಕ ಇದು ಜನ ಅಸಭ್ಯ ಎಂಬುದನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ನವೆಂಬರ್ 8 ರಂದು “Mr and Ms Fresher 2024″ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯು ನೃತ್ಯವನ್ನು ಪ್ರದರ್ಶಿಸಿದ್ದು, ವೀಡಿಯೊ 1.6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಮಹಿಳೆ ವಿಡಿಯೋ ಶೇರ್‌ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಓರ್ವ ಬಳಕೆದಾರ ” ಇದರಲ್ಲಿ ಅಶ್ಲೀಲತೆ ಎಲ್ಲಿದೆ ? ಹುಡುಗಿಯ ವಿಡಿಯೋ ಶೇರ್ ಮಾಡುವ ಮುನ್ನ, ಫೋಟೋ ಬ್ಲರ್ ಮಾಡಿ, ಇಲ್ಲವಾದಲ್ಲಿ ಅವರ ಪರ್ಮಿಷನ್ ತೆಗೆದುಕೊಳ್ಳಿ” ಎಂದಿದ್ದಾರೆ.

ಬಳಕೆದಾರರು ಆಕೆಯ ದೋಷರಹಿತ ನೃತ್ಯ ಚಲನೆಗಳಿಗಾಗಿ ವಿದ್ಯಾರ್ಥಿನಿಯನ್ನು ಶ್ಲಾಘಿಸಿದ್ದು, ಇಂತಹ ವಿಡಿಯೋವನ್ನು ಶೇರ್‌ ಮಾಡಿ ಅಸಭ್ಯ ನೃತ್ಯ ಎಂದು ಹೇಳಿದ್ದ ಮಹಿಳೆಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read