ಒಬ್ಬಂಟಿಯಾಗಿ ಬಂದು ಮತದಾನ ಮಾಡಿದ್ದೇಕೆ ನಟಿ ಐಶ್ವರ್ಯ ರೈ; ಡಿವೋರ್ಸ್ ಪಕ್ಕಾನಾ?

ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಇತ್ತೀಚೆಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು. ಏತನ್ಮಧ್ಯೆ ಮುಂಬೈನಲ್ಲಿ ಸೋಮವಾರ ನಡೆದ 5ನೇ ಹಂತದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು. ಆದರೆ ಈ ವೇಳೆ ಅವರ ಜೊತೆ ಕುಟಂಬದ ಯಾವುದೇ ಸದಸ್ಯರು ಕಾಣಿಸಿಕೊಳ್ಳದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಅದೇನೆಂದರೆ ಐಶ್ವರ್ಯ ರೈ ಮತ್ತು ಅವರ ಅತ್ತೆ ಜಯಾ ಬಚ್ಚನ್ ನಡುವೆ ಗಲಾಟೆಯಾಗಿದೆ ಎಂಬ ಮಾತಿದೆ. ಇದರೊಂದಿಗೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇಬ್ಬರೂ ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎಂಬ ಮಾತು ಸಹ ಬಾಲಿವುಡ್ ಅಂಗಳದಲ್ಲಿ ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ.

ಈ ಗುಸುಗುಸು ಮಾತಿನ ನಡುವೆ ಐಶ್ವರ್ಯ ರೈ ಒಂಟಿಯಾಗಿ ಮತಗಟ್ಟೆಗೆ ಬಂದು ಸರತಿಸಾಲಲ್ಲಿ ನಿಂತು ಮತದಾನ ಮಾಡಿದ್ದು ಪತಿ- ಪತ್ನಿ ನಡುವಿನ ಬಿರುಕು ಜಾಸ್ತಿಯಾಗಿದೆಯಾ ಎಂಬ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read